Tuesday, 13th May 2025

40 ಕೆಜಿ ಹೆರಾಯಿನ್ ಪತ್ತೆ: ಆರು ಪಾಕಿಸ್ತಾನಿಗಳ ಬಂಧನ

ಹಮದಾಬಾದ್: ಭಾರತೀಯ ಕೋಸ್ಟ್ ಗಾರ್ಡ್‌ನೊಂದಿಗೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ನಡೆಸಿದ ಜಂಟಿ ಕಾರ್ಯಾ ಚರಣೆಯಲ್ಲಿ ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ಮೀನುಗಾರಿಕಾ ದೋಣಿಯನ್ನು ವಶಪಡಿಸಿ ಕೊಂಡಿದೆ.

₹ 200 ಕೋಟಿಗೂ ಹೆಚ್ಚು ಮೌಲ್ಯದ 40 ಕೆಜಿ ಹೆರಾಯಿನ್ ಪತ್ತೆಯಾಗಿದ್ದು, ಆರು ಪಾಕಿಸ್ತಾನಿಗಳನ್ನು ಬಂಧಿಸಲಾಗಿದೆ.

ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಕೋಸ್ಟ್ ಗಾರ್ಡ್ ಮತ್ತು ಎಟಿಎಸ್‌ನ ಜಂಟಿ ತಂಡವು ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನಿ ಮೀನುಗಾರಿಕಾ ದೋಣಿಯನ್ನು ಸಮುದ್ರದ ಮಧ್ಯದಲ್ಲಿ ತಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗುಜರಾತ್ ಎಟಿಎಸ್ ಮತ್ತು ಕೋಸ್ಟ್ ಗಾರ್ಡ್ ಈ ಹಿಂದೆಯೂ ಮಾದಕವಸ್ತು ಕಳ್ಳಸಾಗಣೆ ಪ್ರಯತ್ನಗಳನ್ನು ವಿಫಲಗೊಳಿಸಿದ್ದರು.