Monday, 12th May 2025

ಕೇರಳ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ

ತಿರುವನಂತಪುರ: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯು ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾನುವಾರ ಕೇರಳ ಪ್ರವೇಶಿಸಿತು. ಕೇರಳದ ತಿರುವ ನಂತಪುರಂ ಜಿಲ್ಲೆಯ ಪರಸ್ಸಾಲಾದಿಂದ ರಾಹುಲ್ ಯಾತ್ರೆಯ 5 ನೇ ದಿನ ಆರಂಭಿಸಿ ದರು.

ಕೇರಳದ ನೆಯ್ಯಟ್ಟಿಂಕರದಲ್ಲಿರುವ ಡಾ.ಜಿಆರ್ ಪಬ್ಲಿಕ್ ಸ್ಕೂಲ್‌ನಲ್ಲಿ ಪಾದಯಾತ್ರೆ ನಿಲ್ಲಲಿದೆ. ತಮಿಳುನಾಡು ಗಡಿ ಸಮೀಪದ ಪರಸ್ಸಾಲದಿಂದ ಕೇರಳ ಪ್ರವೇಶಿಸಿದ ನಂತರ ರಾಹುಲ್ 19 ದಿನಗಳ ಅವಧಿಯಲ್ಲಿ ಮಲಪ್ಪುರಂನ ನಿಲಂಬೂರ್‌ಗೆ 450 ಕಿ.ಮೀ. ಪ್ರಯಾಣಿಸಲಿದ್ದಾರೆ.

ರಾಹುಲ್ ಅವರು ಭಾರತ್ ಜೋಡೋ ಯಾತ್ರೆಯನ್ನು ಸೆ.7 ರಂದು ಕನ್ಯಾಕುಮಾರಿ ಯಿಂದ ಆರಂಭಿಸಿದರು. ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.

ಇದು 3,500 ಕಿಮೀ ದೂರವನ್ನು ಕ್ರಮಿಸುತ್ತದೆ. 12 ರಾಜ್ಯಗಳನ್ನು ದಾಟಿ ಹೋಗುತ್ತದೆ. ಯಾತ್ರೆಗೆ ಸರಿಸುಮಾರು 150 ದಿನಗಳನ್ನು ತೆಗೆದುಕೊಳ್ಳಲಿದೆ.