ತುಮಕೂರು: ನಗರದ ಕೋಡಿ ಬಸವಣ್ಣ ದೇವಾಲಯದ ಮುಂಭಾಗದ ರಸ್ತೆಯಲ್ಲಿ ರಾಜಗಾಲುವೆ ಮೇಲ್ಭಾಗದಲ್ಲಿ ಬಿದ್ದಿರುವ ಗುಂಡಿಯನ್ನು ಅಧಿಕಾರಿಗಳು ಮುಚ್ಚಿ ಜೀವಹಾನಿ ತಪ್ಪಿಸಬೇಕಿದೆ.

ಈ ರಸ್ತೆ 5ನೇ ವಾರ್ಡ್ ವ್ಯಾಪ್ತಿಗೆ ಸೇರಲಿದ್ದು, ಪದೇ ಪದೇ ಈ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತಲೇ ಇದ್ದು, ಸಾವು-ನೋವುಗಳು ಸಂಭವಿಸುತ್ತಿವೆ. ಈ ರಸ್ತೆಯಲ್ಲಿ ಈಗ ಬಿದ್ದಿರುವ ಗುಂಡಿ ಸಹ ಅಪಘಾತಕ್ಕೆ ರಹದಾರಿಯಂತಿದೆ. ಪ್ರಸ್ತುತ ಮಳೆ ಆರ್ಭಟ ಜಾಸ್ತಿಯಿದೆ.
ರಾಜಗಾಲುವೆ ಹಾದು ಹೋಗಿರುವುದರಿಂದ ಈ ರಸ್ತೆ ಸಂಪೂರ್ಣ ಹಾಳಾಗುವ ಸಾಧ್ಯತೆ ಯೂ ಇದೆ. ಹಾಗಾಗಿ ವಿಳಂಬ ಮಾಡದೆ ಕೂಡಲೇ ಬಿದ್ದಿರುವ ಗುಂಡಿಯನ್ನು ಮುಚ್ಚುವ ಮೂಲಕ ರಸ್ತೆ ದುರಸ್ಥಿಪಡಿಸಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಪಾಲಿಕೆ ಸದಸ್ಯ ಮಹೇಶ್ ಮನವಿ ಮಾಡಿದ್ದಾರೆ.
ನಗರದಲ್ಲಿ ಮಳೆ ಆರ್ಭಟ ಜಾಸ್ತಿಯಾಗಿದ್ದು, ಕುಣಿಗಲ್ ರಸ್ತೆಯೂ ಸಹ ಹಾಳಾಗಿದೆ. ಈ ರಸ್ತೆಯಲ್ಲಿ ವಾಹನಗಳ ಸಂಚರಿಸಲು ಹರಸಾಹಸಪಡುವಂತಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಈ ರಸ್ತೆ ದುರಸ್ಥಿಗೆ ಮುಂದಾಗದಿರುವುದು ವಿಪರ್ಯಾಸಕರ ಸಂಗತಿ.