Thursday, 15th May 2025

ಸಂಜಯ್‌ ರಾವತ್‌ ನ್ಯಾಯಾಂಗ ಬಂಧನ ಸೆ.19ರವರೆಗೆ ವಿಸ್ತರಣೆ

ಮುಂಬೈ: ತ್ರಾಚಾಲ್‌ ಹಗರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನಕ್ಕೊಳ ಗಾಗಿರುವ ರಾಜ್ಯಸಭಾ ಸಂಸದ ಹಾಗೂ ಶಿವಸೇನೆ ನಾಯಕ ಸಂಜಯ್‌ ರಾವತ್‌ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಶೇಷ ನ್ಯಾಯಾಲಯವು ಸೆ.19ರವರೆಗೆ ವಿಸ್ತರಿಸಿದೆ.

ಪತ್ರಾಚಾಲ್‌ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ರಾವುತ್‌ ಅವರನ್ನು ಬಂಧಿಸಿತ್ತು. ವಿವಾರಣೆ ನಡೆಸುತ್ತಿರುವ ಇಡಿ ಅವರ ಅವಧಿಯನ್ನು ಇನ್ನೂ ಹೆಚ್ಚು ವಿಸ್ತರಿಸಲು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು.

ಆದಾಗ್ಯೂ, ಸಂಸತ್ತಿನ ಕೆಲವು ನಮೂನೆಗಳಿಗೆ ಸಹಿ ಹಾಕಲು ಮತ್ತು ನ್ಯಾಯಾಲಯ ಮತ್ತು ಇಡಿಗೆ ಅದರ ಪ್ರತಿಯನ್ನು ಒದಗಿ ಸಲು ನ್ಯಾಯಾಲಯವು ರಾವತ್ ಅವರಿಗೆ ಅವಕಾಶ ನೀಡಲಾಗಿದೆ.

ರಾವುತ್ ಅವರ ಕುಟುಂಬ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿತ್ತು. ಅನೇಕ ಬೆಂಬಲಿಗರೂ ನ್ಯಾಯಾಲಯದ ಮೆಟ್ಟಿಲೇ ರಿದ್ದರು ಎಂದು ಮೂಲಗಳು ವರದಿ ಮಾಡಿವೆ.