Wednesday, 14th May 2025

ಜಾರ್ಖಂಡ್‌ ವಿಧಾನಸಭೆಯ ವಿಶೇಷ ಅಧಿವೇಶನ ಇಂದು

ರಾಂಚಿ: ಶಾಸಕ ಸ್ಥಾನದಿಂದ ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಅನರ್ಹತೆಯ ಭೀತಿ ಎದುರಿಸುತ್ತಿರುವಂತೆಯೇ ಸೋಮವಾರ ರಾಂಚಿಯಲ್ಲಿ ಜಾರ್ಖಂಡ್‌ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯಲಿದೆ.

ಈ ಸಂದರ್ಭದಲ್ಲಿ ಸಿಎಂ ಹೇಮಂತ್‌ ಸೊರೇನ್‌ ವಿಶ್ವಾಸ ಮತ ಯಾಚಿಸಲಿದ್ದಾರೆ.

ಆ.30ರಿಂದ ರಾಯಪುರದ ಐಷಾರಾಮಿ ರೆಸಾರ್ಟ್‌ನಲ್ಲಿದ್ದ ಆಡಳಿತರೂಢ ಜೆಎಂಎಂ ಮತ್ತು ಕಾಂಗ್ರೆಸ್‌ 30 ಶಾಸಕರು ವಿಶೇಷ ವಿಮಾನದಲ್ಲಿ ರಾಂಚಿಗೆ ಆಗಮಿಸಿದ್ದಾರೆ. ಪ್ರತಿಪಕ್ಷ ಬಿಜೆಪಿ “ಅಪರೇಷನ್‌ ಕಮಲ’ ನಡೆಸಲಿದೆ ಎಂಬ ಭೀತಿಯಿಂದ ಅವೆರಲ್ಲರೂ ರೆಸಾರ್ಟ್‌ಗೆ ತೆರಳಿದ್ದರು.