Saturday, 10th May 2025

ಶಿವಮೂರ್ತಿ ಮುರುಘಾ ಶರಣರು ತೀವ್ರ ನಿಗಾ ಘಟಕ್ಕೆ ಸ್ಥಳಾಂತರ

ಚಿತ್ರದುರ್ಗ: ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ತೀವ್ರ ನಿಗಾ ಘಟಕ್ಕೆ ಸ್ಥಳಾಂತರಿಸ ಲಾಯಿತು.

ವೈದ್ಯರು ಹೆಚ್ಚಿನ ಆರೋಗ್ಯ ಪರೀಕ್ಷೆಗಾಗಿ ತೀವ್ರನಿಗಾ ಘಟಕಕ್ಕೆ ಕರೆತಂದಿದ್ದಾರೆ. ಹೃದಯ ಪರೀಕ್ಷೆಯ ವರದಿ ಆಧರಿಸಿ ಚಿಕಿತ್ಸೆ ಬಗ್ಗೆ ವೈದ್ಯರು ನೀರ್ಧಾರ ಕೈಗೊಳ್ಳಲಿದ್ದಾರೆ.

ಜಿಲ್ಲಾ ಕಾರಾಗೃಹದಲ್ಲಿದ್ದ ಅವರ ಆರೋಗ್ಯದಲ್ಲಿ ಬೆಳಿಗ್ಗೆ ಏರುಪೇರು ಕಾಣಿಸಿಕೊಂಡಿದೆ. ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದು ಹೊರರೋಗಿ ಚಿಕಿತ್ಸಾ ಘಟಕದಲ್ಲಿ ತಪಾಸಣೆ ನಡೆಸಲಾಯಿತು.

ಸೀಟಿ ಸ್ಕ್ಯಾನ್, ಆಲ್ಟ್ರಾಸೌಂಡ್, ರಕ್ತ ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳನ್ನು ನಡೆಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆ ಪತ್ತೆಯಾಗಿದ್ದರಿಂದ ತಜ್ಞ ವೈದ್ಯರ ಸಲಹೆ ಪಡೆಯಲಾಗುತ್ತಿದೆ.