Wednesday, 14th May 2025

7,946 ಹೊಸ ಕರೋನಾ ಪ್ರಕರಣ ದೃಢ

ವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,946 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ.

ಒಟ್ಟು ಚೇತರಿಕೆಯ ಪ್ರಮಾಣವು ಸುಮಾರು ಶೇಕಡಾ 98.67ರಷ್ಟಿದೆ. ಕರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ ದೇಶದಲ್ಲಿ 4,38,45,680 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 9,828 ಮಂದಿ ಗುಣಮುಖರಾ ಗಿದ್ದಾರೆ.

ಒಟ್ಟು ಸಕ್ರಿಯ ಪ್ರಕರಣಗಳು 62,748 ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ COVID-19 ಪ್ರಕರಣಗಳು 1,919 ಇಳಿಕೆಯಾಗಿವೆ.

ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ ಶೇಕಡಾ 0.14ರಷ್ಟು ಇದೆ ಎಂದು ಸಚಿವಾಲಯ ತಿಳಿಸಿದೆ.

ಇಂದು ದೇಶದಲ್ಲಿ ದೈನಂದಿನ ಪಾಸಿಟಿವ್ ಪ್ರಮಾಣವು ಶೇಕಡಾ 2.98 ರಷ್ಟಿದೆ. ಆಗಸ್ಟ್ 31 ರವರೆಗೆ 88,61,47,613 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ನಿನ್ನೆ ಒಂದೇ ದಿನ 2,66,477 ಮಾದರಿಗಳನ್ನು ಪರೀಕ್ಷಿಸಲಾಗಿದೆ.