Tuesday, 20th May 2025

ಪುಟಾಣಿಗಳ ಕೈಚಳಕದಲಿ ಪರಿಸರಸ್ನೇಹಿ ಗಣೇಶ

ತುಮಕೂರು: ಆಲದ ಮರದ ಪಾರ್ಕ್ನಲ್ಲಿ ಜಮಾಯಿಸಿದ್ದ ವಿವಿಧ ಶಾಲೆಗಳ ನೂರಾರು ಮಕ್ಕಳು ಗಣೇಶೋತ್ಸವ ಸಂಭ್ರಮದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದರು.
ವರ್ಣೋದಯ ಆರ್ಟ್ ಗ್ರೂಪ್‌ ಟ್ರಸ್ಟ್, ಪ್ರೆಸ್‌ಕ್ಲಬ್ ತುಮಕೂರು, ತುಮಕೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ನಡೆದ ಪರಿಸರ ಸ್ನೇಹಿ ಗಣೇಶಮೂರ್ತಿ ರಚನಾ ಕಾರ್ಯಾಗಾರದಲ್ಲಿ ಸುಂದರ ಗಣೇಶ ಮೂರ್ತಿಗಳು ಪುಟಾಣಿಗಳ ಕೈಚಳಕ ದಲ್ಲಿ ನಿರ್ಮಾಣವಾದವು.
ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುಮಾರ್, ಪ್ರೆಸ್‌ಕ್ಲಬ್ ಅಧ್ಯಕ್ಷ ಶಶಿಧರ್ ಎಸ್.ದೋಣಿಹಕ್ಲು, ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಸತೀಶ್, ಆರ್.ಸಂಗಮೇಶ್, ತೇಜಸ್ವಿನಿ ಮತ್ತಿತರರು ಇದ್ದರು.