Wednesday, 14th May 2025

ಸೋನಾಲಿ ಫೋಗಟ್ ಹತ್ಯೆ ಪ್ರಕರಣ: ಬಂಧಿತರ ಸಂಖ್ಯೆ ಐದಕ್ಕೆ ಏರಿಕೆ

ಣಜಿ: ಸೋನಾಲಿ ಫೋಗಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗೋವಾ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದು, ಇದುವರೆಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.

ಈ ಹಿಂದೆ ಬಂಧಿತರಾಗಿದ್ದ ದತ್ತಪ್ರಸಾದ್ ಗಾಂವ್ಕರ್ ಅವರಿಗೆ ಡ್ರಗ್ಸ್ ಸರಬ ರಾಜು ಮಾಡುತ್ತಿದ್ದ ಆರೋಪದ ಮೇಲೆ ರಾಮ ಅಲಿಯಾಸ್ ರಾಮದಾಸ್ ಮಾಂಡ್ರೇಕರ್ ನನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.

ಸುಧೀರ್ ಸಗ್ವಾನ್, ಸುಖ್ವಿಂದರ್ ವಾಸಿ, ಎಡ್ವಿನ್ ನೂನ್ಸ್, ದತ್ತಪ್ರಸಾದ್ ಗಾಂವ್ಕರ್ ಮತ್ತು ರಾಮದಾಸ್ ಮಾಂಡ್ರೇಕರ್ ಎಂಬುವರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ.

ಹರಿಯಾಣದ ಹಿಸಾರ್ ಮೂಲದ ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಅವರನ್ನು ಆಗಸ್ಟ್ 23 ರಂದು ಅಂಜುನಾದ ಖಾಸಗಿ ಆಸ್ಪತ್ರೆಗೆ ಕರೆತರಲಾ ಯಿತು.