Thursday, 15th May 2025

ರಾಜು ಶ್ರೀವಾಸ್ತವ್‌’ಗೆ ಮರಳಿತು ಪ್ರಜ್ಞೆ

ವದೆಹಲಿ: ಹಾಸ್ಯನಟ ರಾಜು ಶ್ರೀವಾಸ್ತವ ಅವರು ಮರಳಿ ಪ್ರಜ್ಞೆ ಪಡೆದಿದ್ದಾರೆ ಎಂದು ಹಾಸ್ಯನಟ ಸುನೀಲ್ ಪಾಲ್ ಅವರು ರಾಜು ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ನೀಡಿ ದ್ದಾರೆ.

ಆ.10 ರಂದು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಬಳಲುತ್ತಿದ್ದ ರಾಜು ಶ್ರೀವಾಸ್ತವ ಅವರನ್ನು ನವದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು.

“ಸ್ನೇಹಿತರೇ, ರಾಜು ಶ್ರೀವಾಸ್ತವ್ ಅವರಿಗೆ ಪ್ರಜ್ಞೆ ಬಂದ ಬಗ್ಗೆ ನಿಮಗೆಲ್ಲರಿಗೂ ಒಳ್ಳೆಯ ಸುದ್ದಿ ಇದೆ. ನಾನು ಯಾವಾಗಲೂ ಪವಾಡ ನಡೆಯುತ್ತದೆ ಎಂದು ಹೇಳುತ್ತಿದ್ದೆ, ಅದು ಸಂಭವಿಸಿತು ಮತ್ತು ದೇವರು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ರಾಜು ಭಾಯ್ ನೀವು ಸಾವಿರ ವರ್ಷ ಬದುಕಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ರಾಜು ಸಾವಿನ ಬಗ್ಗೆ ಹಲವಾರು ವದಂತಿಗಳು ಇದ್ದವು ಆದರೆ ಅವೆಲ್ಲವೂ ಸುಳ್ಳು ಎಂದು ಕುಟುಂಬ ಸದಸ್ಯರು ಹೇಳಿದ್ದರು.