Thursday, 15th May 2025

ಅತ್ಯಾಚಾರಿಯ ಜತೆ ಸಂತ್ರಸ್ತೆಯ ವಿವಾಹ: ಪ್ರಕರಣ ರದ್ದು

karnataka high court

ಬೆಂಗಳೂರು: ಅತ್ಯಾಚಾರ ಮಾಡಿದ ಯುವಕನನ್ನೆ ಸಂತ್ರಸ್ತೆ ಮದುವೆಯಾದ ಕಾರಣ ಆತನ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ಯನ್ನು ಕರ್ನಾಟಕ ಹೈಕೋಟ್‌ ರದ್ದುಗೊಳಿಸಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಅತ್ಯಾ ಚಾರ ಆರೋಪಗಳನ್ನು ಎದುರಿಸುತ್ತಿರುವ 23 ವರ್ಷದ ಯುವಕನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

17 ವರ್ಷದ ಸಂತ್ರಸ್ತೆ 18 ವರ್ಷ ತುಂಬಿದ ನಂತರ ಆರೋಪಿಯನ್ನೇ ಮದುವೆಯಾಗಿದ್ದಳು ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ದಂಪತಿಗೆ ಮಗು ಕೂಡ ಆಗಿದೆ.