Thursday, 15th May 2025

ಹಾಸ್ಯ ನಟ ರಾಜು ಶ್ರೀವಾಸ್ತವ ಮೆದುಳು ನಿಷ್ಕ್ರಿಯ

ನವದೆಹಲಿ: ಆ.10 ರಂದು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನ ಹಾಸ್ಯ ನಟ ರಾಜು ಶ್ರೀವಾಸ್ತವ ಅವರ ಸ್ಥಿತಿ ತೀವ್ರ ಗಂಭೀರವಾಗಿದ್ದು ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವರದಿಯಾಗಿದೆ.

ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವವರು, “ದಯವಿಟ್ಟು ರಾಜು ಶ್ರೀ ವಾಸ್ತವ ಅವರಿಗಾಗಿ ಪ್ರಾರ್ಥಿಸಿ ಅವರು ತೀವ್ರ ಗಂಭೀರ ಸ್ಥಿತಿ ಯಲ್ಲಿದ್ದಾರೆ.

ಮೆದುಳು ಕಾರ್ಯ ಸ್ಥಗಿತಗೊಂಡಿದೆ ದಯವಿಟ್ಟು ರಾಜುಬಾಯ್ ಗಾಗಿ ಪ್ರಾರ್ಥಿಸಿ” ಎಂದು ಮನವಿ ಮಾಡಿದ್ದಾರೆ.

ರಾಜು ಶ್ರೀವಾಸ್ತವ ಅವರು ಹಾಸ್ಯ ಕಲಾವಿದರಲ್ಲದೆ ಒಂದಷ್ಟು ಸಿನಿಮಾ ಗಳಲ್ಲೂ ನಟಿಸಿ. ಕೆಲ ಕಾಲ ರಾಜಕೀಯದಲ್ಲಿಯೂ ತೊಡಗಿಕೊಂಡಿದ್ದರು.