Wednesday, 14th May 2025

ಗುಜರಾತ್ ಚುನಾವಣೆ: ಎಎಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ

ಗಾಂಧಿನಗರ: ಈ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.

ಒಟ್ಟು ಒಂಬತ್ತು ಅಭ್ಯರ್ಥಿಗಳನ್ನು ಎಎಪಿಯು ಈಗಲೇ ಚುನಾವಣೆ ಕಣಕ್ಕೆ ಇಳಿಸಿದೆ.

ರಾಜು ಕರ್ಪದ (ಚೋಟಿಲಾ), ಪೀಯುಶ್‌ ಪರ್ಮರ್‌ (ಮಂಗ್ರೋಲ್‌- ಜುನಗಢ), ಕರ್ಸನ್‌ಬಾಯಿ ಕರ್ಮುರ್‌ (ಜಾಮ್‌ನಗರ್‌ ಉತ್ತರ), ನಿಮಿಷಾ ಕುಂಟ್‌ (ಗೊಂಡಾಲ್‌), ಪ್ರಕಾಶ್‌ ಬಾಯಿ ಕಂಟ್ರಾಕ್ಟರ್‌ (ಚೋರ್ಯಾಸಿ), ವಿಕ್ರಮ್‌ ಸೋರಾನಿ (ವಾಂಕನೇರ್‌), ಭರತ್‌ ವಖಾಲ (ದೇವಗಢ್‌ಬಾರಿಯಾ), ಜೆ.ಜೆ ಮೇವಾಡ (ಅಸರ್ವ), ವಿಪುಲ್‌ ಸಾಖಿಯ (ದೋರಾಜಿ) ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.

ಆ. 2ರಂದು ಎಎಪಿ 10 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ 2022ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.