Saturday, 10th May 2025

ನೆರೆ ಪ್ರದೇಶದ ವೀಕ್ಷಣೆ ವೇಳೆ ಸಿದ್ದುಗೆ ಪ್ರತಿಭಟನೆ ಬಿಸಿ

ಕೊಡಗು : ಜಿಲ್ಲೆಯ ತಿತಿಮತಿ ನೆರೆ ಪ್ರದೇಶದ ವೀಕ್ಷಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದ್ದ ವೇಳೆ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.

ಇದರಿಂದ ಸಿದ್ದರಾಮಯ್ಯವರಿಗೆ ಭಾರೀ ಮುಖಭಂಗ ಎದುರಾಗಿದೆ. ಸಿದ್ದರಾಮಯ್ಯ ತಿತಿಮತಿ ಪ್ರದೇಶಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಯುವ ಮೋರ್ಚಾ ಸದಸ್ಯರು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.