Wednesday, 14th May 2025

ಪಂಜಾಬ್‌ನಲ್ಲಿ 75 ಆಮ್ ಆದ್ಮಿ ಕ್ಲಿನಿಕ್‌ ಆರಂಭ ಶೀಘ್ರ

ಲುಧಿಯಾನ: ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಅಂಗವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆ ರಾಜ್ಯದ ಜನತೆಗಾಗಿ 75 ಆಮ್ ಆದ್ಮಿ ಕ್ಲಿನಿಕ್‌ಗಳನ್ನು (ಜನತಾ ಆಸ್ಪತ್ರೆಗಳು) ತೆರೆಯಲು ನಿರ್ಧರಿಸಿದ್ದಾರೆ.

ಸೋಮವಾರ ಲುಧಿಯಾನದ ಗುರು ನಾನಕ್ ಸಭಾಂಗಣದಲ್ಲಿ ಸ್ವಾತಂತ್ರ್ಯೋ ತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿ, 75 ಆಮ್ ಆದ್ಮಿ ಕ್ಲಿನಿಕ್‌ ಗಳಲ್ಲಿ ನೂರಕ್ಕೂ ಹೆಚ್ಚು ಬಗೆಯ ವೈದ್ಯಕೀಯ ತಪಾಸಣೆಗಳನ್ನು ಉಚಿತವಾಗಿ ನೆರ ವೇರಿಸಲಾಗುವುದು. ಎಂಬಿಬಿಎಸ್ ವೈದ್ಯರನ್ನು ಒಳಗೊಳ್ಳುವ ಈ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಉಚಿತವಾಗಿ ನೀಡಲಾ ಗುತ್ತದೆ ಎಂದು ಮಾನ್ ತಿಳಿಸಿದ್ದಾರೆ.

75 ಆಸ್ಪತ್ರೆಗಳನ್ನು ಅತ್ಯಂತ ಮಾದರಿ ಎನ್ನುವಂತೆ ನಡೆಸಲಾಗುತ್ತದೆ. ಬಳಿಕ ರಾಜ್ಯದಲ್ಲಿ ಇದೇ ರೀತಿಯ ಮತ್ತಷ್ಟು ಆಸ್ಪತ್ರೆಗಳನ್ನು ತೆರೆಯಲಾಗುತ್ತದೆ ಎಂದು ಭರವಸೆ ನೀಡಿ ದ್ದಾರೆ.

ಪ್ರತಿ ಮನೆಗೆ 300 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜುಲೈ 1 ರಿಂದ ಆರಂಭಿಸಲಾಗಿದೆ. ಒಬ್ಬ ಶಾಸಕ, ಒಂದು ಪಿಂಚಣಿಯೂ ಕೂಡ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಹೇಳಿದರು.