ಯಶೋ ಬೆಳಗು
yashomathy@gmail.com
ದಾಸ್ಯಮುಕ್ತರಾಗಿ ಅರ್ಧರಾತ್ರಿಯ ಸ್ವಾತಂತ್ರ್ಯಕ್ಕೆ ಎಪ್ಪತ್ತೈದು ವರ್ಷಗಳಾದವು! ಸಾಮಾನ್ಯವಾಗಿ ಹಿಂದೂ ಪಂಚಾಂಗದ
ಪ್ರಕಾರ ಸೂರ್ಯೋದಯವನ್ನೇ ದಿನದ ಆರಂಭವಾಗಿ ಪರಿಗಣಿಸುವ ನಮಗೆ ಬ್ರಿಟಿಷ್ ಲೆಕ್ಕಾಚಾರದಲ್ಲಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಸಿಕ್ಕ ಸ್ವಾತಂತ್ರ್ಯ ಆಗಸ್ಟ್ ಹದಿನಾಲ್ಕಕ್ಕೆ ಸೇರುತ್ತದಾ? ಅಥವಾ ಆಗಸ್ಟ್ ಹದಿನೈದಕ್ಕೆ ಸೇರುತ್ತದಾ? ಅನ್ನುವ ಗೊಂದಲ ಸೃಷ್ಟಿಸಿ ಅವರ divide and rule policy ಗೆ ಪುಷ್ಟಿ ಕೊಡುವಂತೆ ಒಂದಾಗಿದ್ದ ಹಿಂದೂಸ್ತಾನವನ್ನು ಪಾಕಿಸ್ತಾನ ಹಾಗೂ ಭಾರತ ವನ್ನಾಗಿ ಒಡೆದು ಇಂದಿಗೂ ಅವರೆಡರ ನಡುವೆ ಹೊಂದಾಣಿಕೆ ಸಾಧ್ಯವಾಗದಷ್ಟು ವೈಷಮ್ಯ ಬೆಳೆದು ನಿಲ್ಲುವಂತೆ ಮಾಡಿ ದೇಶ ತೊರೆದು ಹೋದರು.
ಆದರೆ ಅವರು ಬಿತ್ತಿದ ವಿಭಜನೆಯ ಬೀಜಗಳು ಇಂದು ಹೆಮ್ಮರವಾಗಿ ಬೆಳೆದು ದೇಶವನ್ನು ಚೂರು ಚೂರು ಮಾಡಿಬಿಡುತ್ತಿದೆಯಾ? ಅನ್ನುವ ಆತಂಕ ಸದಾ ಕಾಡುತ್ತದೆ. ಯುದ್ಧಗಳ ಮೂಲಕ, ದಾಳಿಗಳ ಮೂಲಕ, ವ್ಯಾಪಾರದ ಮೂಲಕ ಬಂದ ಎಲ್ಲ ಮೊಘಲ್ ದೊರೆ ಗಳೂ, ಯೂರೋಪಿಯನ್ನರೂ, ನಮ್ಮ ಸಮೃದ್ಧ ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಹವಣಿಸಿದವರೇ… ಆದರೆ ಬ್ರಿಟಿಷರು ಮಾತ್ರ ನಮ್ಮ ಬಲಹೀನತೆಯನ್ನು ತಮ್ಮ ಲಾಭಕ್ಕಾಗಿ ಚೆನ್ನಾಗಿ ಬಳಸಿಕೊಂಡು ನಮ್ಮ ಮೇಲೆಯೇ ಅಧಿಕಾರ ಚಲಾ ಯಿಸಿದರು.
ಯಾವ ಡಾಕುಗಳಿಗೂ ಕಡಿಮೆಯಿರದಂತೆ ಸಮೃದ್ಧವಾಗಿದ್ದ ನಮ್ಮ ದೇಶದ ಸಂಪತ್ತನ್ನು ಟನ್ನುಗಟ್ಟಲೆ ಲೂಟಿ ಹೊಡೆದು ತಮ್ಮ ದೇಶಕ್ಕೆ ರವಾನಿಸಿಕೊಂಡರು. ಅದ್ಯಾವುದರ ಅರಿವೂ ಬಾರದೆ ಅವರ ಬಣ್ಣ, ಗತ್ತು, ಉಡುಗೆ-ತೊಡುಗೆ, ಜೀವನಶೈಲಿಗೆ ಮರುಳಾಗಿ ಜೀ ಹುಜೂರ್ ಎನ್ನುತ್ತ ಅವರ ಅಪ್ಪಣೆಗಳಿಗೆ ತಲೆಬಾಗುತ್ತಾ, ತಮ್ಮವರ ಬೆನ್ನಿಗೇ ಚೂರಿ ಹಾಕುತ್ತಾ ಅವರ ಸ್ನೇಹ – ವಿಶ್ವಾಸ ಸಂಪಾದಿಸುತ್ತ ಅವರಿಗೆ ಹತ್ತಿರವಾಗಲು ಹವಣಿಸಿದರು. ಜಾಗೃತಗೊಂಡು ವಿರೋಧಿಸಿದವರಿಗೆ ಸಾರ್ವಜನಿಕರೆದುರಿಗೇ ಜೀವ ಹರಣದಂಥ ಕಠಿಣ ಶಿಕ್ಷೆ ವಿಧಿಸಿದರು.
ಇದರಿಂದ ಅವರ ವಿರುದ್ಧ ದನಿಯೆತ್ತಿದವರಿಗೆ ಯಾವ ಗತಿ ಒದಗುತ್ತದೆಂಬುದನ್ನು ಸೂಚ್ಯವಾಗಿ ತಿಳಿಸಿ ಜನಗಳಲ್ಲಿ ಜೀವಭಯ ವನ್ನು ಸೃಷ್ಟಿಸಿದರು. ಆದರೆ ಎಲ್ಲ ಸಹನೆಗೂ ಒಂದು ಮಿತಿ ಇರುತ್ತದೆ. ಮಿತಿ ಮೀರಿದಾಗ ಅದು ಸ್ಫೋಟಗೊಳ್ಳುತ್ತದೆ.
ಸತ್ಯಾಗ್ರಹಗಳ ಮೂಲಕ, ಚಳುವಳಿಗಳ ಮೂಲಕ, ದಂಗೆಯೇಳುವ ಮೂಲಕ, ಬಹಿಷ್ಕಾರದ ಮೂಲಕ ಸಹಸ್ರಾರು ಜನರು ಒಗ್ಗಟ್ಟಾಗಿ ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ತಿರುಗಿ ಬಿದ್ದರು. ಅವರು ನೀಡಿದ ಶಿಕ್ಷೆಗಳಿಗೆಲ್ಲ ತಲೆಯೊಡ್ಡಿ ತಮ್ಮ ಬದುಕನ್ನು ಹೋರಾಟಕ್ಕಾಗಿಯೇ ಮುಡಿಪಾಗಿಸಿದರು.
ಸಹನೆ-ಸರಳತೆ-ಸ್ವಾವಲಂಬನೆ-ಶಾಂತಿಯ ಪ್ರತಿಪಾದನೆಯ ಮೂಲಕ ಕಾಲ್ನಡಿಗೆಯ ದೇಶದ ಮೂಲೆ ಮೂಲೆಗಳನ್ನು ತಲುಪಿ ಜನರ ಬೆಂಬಲವನ್ನು ಗಳಿಸಿಕೊಂಡು, ಸ್ವದೇಶೀ ಪ್ರೇಮವನ್ನು ಹುಟ್ಟುಹಾಕುತ್ತಾ ಮಹಾತ್ಮರೆನಿಸಿಕೊಂಡ ಕರಮಚಂದರ
ಶಾಂತಿ ಮಂತ್ರವೇ ಕೊನೆಗೆ ಅವರಿಗೆ ಮುಳುವಾಯಿತು. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರಧ್ವಜ.
ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆವ ಬಲಿದಾನಗಳ ಸಂಕೇತವಾದ ಕೇಸರಿ, ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿ ಬಿಳಿಯ ಬಣ್ಣ ವನ್ನೂ, ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯಗಳ ಸಂಕೇತವಾಗಿ ಹಸಿರನ್ನೂ, 24 ಸಮಾನ ಗೆರೆಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರಕ್ಕೆ ನೌಕಾನೀಲಿ ಬಣ್ಣವನ್ನು
ಹೊಂದಿಸಿ.
ಪ್ರಪ್ರಥಮ ಬಾರಿಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಮೊದಲೇ ಅದನ್ನು ವಿನ್ಯಾಸಗೊಳಿಸಿದವರು ದೇಶಭಕ್ತಿಯನ್ನು ನರನರಗಳಲ್ಲೂ ತುಂಬಿಕೊಂಡಿದ್ದ ಆಂಧ್ರಪ್ರದೇಶದ ಕೃಷ್ಣ ಜಿಯ ಪಿಂಗಳಿ ವೆಂಕಯ್ಯ! ವಿವಿಧ ರಾಜಪ್ರಭುತ್ವದ ರಾಜ್ಯಗಳ ಆಡಳಿತಗಾರರಿಂದ ಭಾರತದ ಸ್ವಾತಂತ್ರ್ಯ ಹೋರಾಟದ ಚಳುವಳಿಯ ಸಮಯದಲ್ಲಿ ಹಲವು ರೀತಿಯ ವಿವಿಧ ವಿನ್ಯಾಸಗಳನ್ನು
ಒಳಗೊಂಡಿದ್ದ ಧ್ವಜಗಳನ್ನು ಬಳಸಲಾಯಿತು. 1857ರ ದಂಗೆಯ ನಂತರ ಭಾರತದ ಬ್ರಿಟಿಷ್ ಆಡಳಿತಗಾರರಿಂದ ಏಕ ಭಾರತೀಯ ಧ್ವಜದ ಪರಿಕಲ್ಪನೆ ಆರಂಭಗೊಂಡಿತು.
ಇದು ನೇರ ಸಾಮ್ರಾಜ್ಯಶಾಹಿ ಆಳ್ವಿಕೆಯನ್ನು ಸ್ಥಾಪಿಸಲು ಕಾರಣವಾಯಿತು. ಮೊದಲ ಧ್ವಜದ ವಿನ್ಯಾಸವು ಪಾಶ್ಚಿಮಾತ್ಯ ಹೆರಾಲ್ಡಿಕ್ ಮಾನದಂಡಗಳನ್ನು ಆಧರಿಸಿ ರಚಿಸಲಾಗಿತ್ತು. ಅದರಲ್ಲಿ ಕೆನಡಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ಬ್ರಿಟಿಷ್ ವಸಾಹತುಗಳ ಧ್ವಜಗಳ ಹೋಲಿಕೆ ಸಾಕಷ್ಟಿತ್ತು. ಕೆಂಪು ಬಣ್ಣವನ್ನೊಳಗೊಂಡಿದ್ದ ಧ್ವಜದ ಎಡಬಾಗದಲ್ಲಿ ಯೂನಿಯನ್ ಜಾಕ್ ಹಾಗೂ ಬಲಬಾಗದ ಮಧ್ಯದಲ್ಲಿ ರಾಯಲ್ ಕಿರೀಟದ ನಡುವೆ ನಕ್ಷತ್ರವನ್ನು ಒಳಗೊಂಡಿತ್ತು.
ನಕ್ಷತ್ರವು ಭಾರತೀಯತೆಯನ್ನು ಹೇಗೆ ಬಿಂಬಿಸುತ್ತದೆ ಎಂಬ ಪ್ರಶ್ನೆ ಎದ್ದಾಗ, ಅದಕ್ಕೆ ಪರಿಹಾರವಾಗಿ ವಿಕ್ಟೋರಿಯಾ ರಾಣಿ ತನ್ನ ಭಾರತೀಯ ಪ್ರಜೆಗಳಿಂದ ಸಾಮ್ರಾಜ್ಯಕ್ಕೆ ಮಾಡಿದ ಸೇವೆಗಳನ್ನು ಗೌರವಿಸಲು ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಇಂಡಿಯಾವನ್ನು ರಚಿಸಿದ್ದಳು. ಆನಂತರ ಎಲ್ಲ ಭಾರತೀಯ ರಾಜಪ್ರಭುತ್ವದ ರಾಜ್ಯಗಳು ಯೂರೋಪಿನ ಹೆರಾಲ್ಡಿಕ್ ಮಾನದಂಡಗಳ ಆಧಾರದ ಮೇಲೆ ಚಿಹ್ನೆಗಳನ್ನು ಹೊಂದಿರುವ ಧ್ವಜಗಳನ್ನು ಸ್ವೀಕರಿಸಿದ್ದವು.
ಯೂರೋಪಿನಲ್ಲಿ 1579ರಲ್ಲಿ, ಸ್ಪ್ಯಾನಿಷ್ ಸಾಮ್ರಾಜ್ಯದಿಂದ ಡಚ್ ರಿಪಬ್ಲಿಕ್ ಸ್ವಾತಂತ್ರ್ಯವನ್ನು ಸ್ಥಾಪಿಸಿ ಎಂಬತ್ತು ವರ್ಷಗಳ ಯುದ್ಧದ ಸಮಯದಲ್ಲಿ ಹೊಸದಾಗಿ ರೂಪುಗೊಂಡ ನೆದರ್ಲೆಂಡ್ಸ್ ವಿಶ್ವದ ಮೊದಲ ತ್ರಿವರ್ಣವನ್ನು ಧ್ವಜದಲ್ಲಿ ಅಳವಡಿಸಿ ಕೊಂಡಿತು. ಇದು ಕಿತ್ತಳೆ-ಬಿಳಿ-ನೀಲಿ ಬಣ್ಣಗಳನ್ನೊಳಗೊಂಡಿತ್ತು. ಈ ಧ್ವಜವು ಸ್ವಾತಂತ್ರ್ಯದ ಸಂಕೇತವಾಗಿ ಚಾಲ್ತಿಗೆ ಬಂದಿತ್ತು.
ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಗಣರಾಜ್ಯವನ್ನು ಸಂಕೇತಿಸಲು ನೀಲಿ, ಬಿಳಿ ಮತ್ತು ಕೆಂಪು ಧ್ವಜವನ್ನು ಅಳವಡಿಸಿಕೊಳ್ಳ ಲಾಯಿತು. ನೆದರ್ಲೆಂಡ್ಸ್ ನ ಧ್ವಜವು ಫ್ರಾನ್ಸ್ ನ ಧ್ವಜವನ್ನು ಪ್ರೇರೇಪಿಸಿತು. ಇದು ಪ್ರಪಂಚದಾದ್ಯಂತದ ದೇಶಗಳಲ್ಲಿ ಇನ್ನೂ ಅನೇಕ ತ್ರಿವರ್ಣ ಧ್ವಜಗಳಿಗೆ ಸೂರ್ತಿ ನೀಡಿತು. ಪ್ರತಿಯೊಂದು ದೇಶವು ತಮ್ಮ ಧ್ವಜವನ್ನು ತ್ರಿವರ್ಣಗಳಲ್ಲಿ ಪ್ರತಿನಿಧಿಸಲು ತನ್ನದೇ ಆದ ಬಣ್ಣಗಳ ಆಯ್ಕೆಯನ್ನು ತೆಗೆದುಕೊಂಡಿತು.
ಸ್ವಾತಂತ್ರ್ಯಪೂರ್ವದ ಕಟುಸತ್ಯವೆಂದರೆ ಭಾರತವು ಎಂದಿಗೂ ಒಂದು ರಾಷ್ಟ್ರವಾಗಿ ಪ್ರತಿನಿಧಿಸುವ ರಾಷ್ಟ್ರಧ್ವಜವನ್ನು ಹೊಂದಿ ರಲಿಲ್ಲ. 1905ರ ಬಂಗಾಳ ವಿಭಜನೆಯನ್ನು ಘೋಷಿಸುವವರೆಗೂ ರಾಷ್ರೀಯ ಧ್ವಜವನ್ನು ಹೊಂದುವ ಅಗತ್ಯವನ್ನು ಭಾರತೀ ಯರು ನಿಜವಾಗಿಯೂ ಅನುಭವಿಸಿರಲಿಲ್ಲ. ಆ ದಿನವನ್ನು ರಾಷ್ಟ್ರೀಯ ಶೋಕಾಚರಣೆಯ ದಿನವೆಂದು ಘೋಷಿಸಲಾಯಿತು.
ಒಂದು ವರ್ಷದ ನಂತರ, ವಿಭಜನೆ ವಿರೋಧಿ ಚಳವಳಿಯ ವಾರ್ಷಿಕೋತ್ಸವದಂದು ಧ್ವಜವನ್ನು ಹಾರಿಸಲಾಯಿತು. ಇದನ್ನು ಸಚಿಂದ್ರ ಪ್ರಸಾದ್ ಬೋಸ್ ವಿನ್ಯಾಸಗೊಳಿಸಿದ್ದರು. ವಿಭಜನೆಯ ನಂತರ ಜನರು ಧ್ವಜವನ್ನು ಮರೆತುಬಿಟ್ಟರು. ಜರ್ಮನಿ
ಯಲ್ಲಿ ನಡೆದ ಎರಡನೇ ಅಂತಾರಾಷ್ಟ್ರೀಯ ಸಮಾಜವಾದಿ ಕಾಂಗ್ರಸ್ ನಲ್ಲಿ ಭಾಗವಹಿಸಿದ್ದ ಮೇಡಂ ಭಿಕಾಜಿ ರುಸ್ತಂ ಕಾಮಾ ಅವರು ಬ್ರಿಟಿಷರೊಂದಿಗಿನ ರಾಜಕೀಯ ಹೋರಾಟದ ಕುರಿತು ಭಾಷಣ ಮಾಡಿ ಧ್ವಜಾರೋಹಣ ಮಾಡಿದ್ದರು.
ರಾಷ್ಟ್ರೀಯವಾದಿ ಸ್ವದೇಶಿ ಆಂದೋಲನದ ಭಾಗವಾದ ವಂದೇ ಮಾತರಂ ತ್ರಿವರ್ಣ ಧ್ವಜವು ಎಂಟು ಪ್ರಾಂತ್ಯಗಳನ್ನು ಪ್ರತಿನಿಧಿಸುವ ಮೇಲಿನ ಹಸಿರು ಪಟ್ಟಿಯಲ್ಲಿ ಎಂಟು ಬಿಳಿ ಕಮಲಗಳು, ಕೆಳಗಿನ ಕೆಂಪು ಪಟ್ಟಿಯಲ್ಲಿ ಸೂರ್ಯ ಮತ್ತು ಅರ್ಧ ಚಂದ್ರಾಕಾರ ಮತ್ತು ಮಧ್ಯದ ಹಳದಿ ಪಟ್ಟಿಯಲ್ಲಿ ವಂದೇ ಮಾತರಂ ಘೋಷಣೆಯನ್ನು ಒಳಗೊಂಡಿತ್ತು. ಯಾವುದೇ ಸಮಾರಂಭವಿಲ್ಲದೆ ಕಲ್ಕತ್ತಾ ದಲ್ಲಿ ಧ್ವಜವನ್ನು ಹಾರಿಸಲಾಯಿತು. ಅದೇ ಸಮಯದಲ್ಲಿ, ಹಿಂದೂ ಸುಧಾರಣಾವಾದಿ ಮತ್ತು ಸ್ವಾಮಿ ವಿವೇಕಾನಂದರ ಶಿಷ್ಯೆ ಸಹೋದರಿ ನಿವೇದಿತಾ ಧ್ವಜದ ಮತ್ತೊಂದು ವಿನ್ಯಾಸವನ್ನು ರೂಪಿಸಿದರು.
ವಂದೇ ಮಾತರಂ ಶೀರ್ಷಿಕೆಯು ಸಿಡಿಲಿನ ಸುತ್ತಲೂ ವಿಭಜನೆಯಾಗುವಂತೆ ಧ್ವಜದ ಮಧ್ಯದಲ್ಲಿ ಗಡಿಗೆ ಮತ್ತು ನೂರೆಂಟು
ಎಣ್ಣೆದೀಪಗಳನ್ನು ಒಳಗೊಂಡಿತ್ತು, ಹಾಗೆಯೇ ಹೋಮ್ ರೂಲ್ ಚಳುವಳಿಯ ಸಮಯದಲ್ಲಿ ಬಾಲಗಂಗಾಧರ ತಿಲಕ್ ಮತ್ತು ಶ್ರೀಮತಿ ಅನಿಬೆಸೆಂಟ್ರವರು ಸಹ ಧ್ವಜವನ್ನು ವಿನ್ಯಾಸಗೊಳಿಸಿದ್ದರು. ಆದರೆ ಯಾವುದೂ ರಾಷ್ಟ್ರೀಯತಾವಾದಿ ಚಳುವಳಿಯ ಗಮನ ಸೆಳೆಯಲಿಲ್ಲ.
1921ರಲ್ಲಿ ಗಾಂಧೀಜಿಯವರು ಶ್ರೀಪಿಂಗಳಿ ವೆಂಕಯ್ಯ ನವರಿಗೆ ರಾಷ್ಟ್ರೀಯ ಧ್ವಜವನ್ನು ವಿನ್ಯಾಸಗೊಳಿಸಲು ಕೇಳಿದರು. ಅದು ಸ್ವಾವಲಂಬನೆ, ಪ್ರಗತಿ ಮತ್ತು ಸಾಮಾನ್ಯ ಜನರನ್ನು ಪ್ರತಿನಿಧಿಸುವ ಧ್ವಜದಲ್ಲಿ ಚರಕವಿರಬೇಕು. ಇದನ್ನು ಸ್ವರಾಜ್ ಧ್ವಜ, ಗಾಂಽ ಧ್ವಜ ಮತ್ತು ಚರಕಾ ಧ್ವಜವೆಂದಷ್ಟೇ ಗುರುತಿಸಲಾಯಿತು. ಇದರಿಂದ 1931ರಲ್ಲಿ ಧ್ವಜವನ್ನು ಮಾರ್ಪಡಿಸಲು ಏಳು ಸದಸ್ಯರ
ಧ್ವಜ ಸಮಿತಿಯನ್ನು ಕರಾಚಿಯಲ್ಲಿ ಸ್ಥಾಪಿಸಿ ಅದಕ್ಕೆ ಹೊಸ ವಿನ್ಯಾಸವನ್ನು ನೀಡಿದರು. ಲಾರ್ಡ್ ಮೌಂಟ್ ಬ್ಯಾಟನ್ ಭಾರತ ವನ್ನು ಸ್ವತಂತ್ರಗೊಳಿಸುವ ನಿರ್ಧಾರವನ್ನು ಘೋಷಿಸಿದಾಗ ಭಾರತ ಎದಿರು ನೋಡುತ್ತಿದ್ದ ಆ ಸುದಿನ ಬಂದೇ ಬಿಟ್ಟಿತು.
ಎಲ್ಲಾ ಪಕ್ಷಗಳಿಗೂ ಸ್ವೀಕಾರವಾಗುವಂತಹ ಧ್ವಜದ ಅಗತ್ಯ ಮನಗಂಡು ಮುಕ್ತಭಾರತಕ್ಕಾಗಿ ಧ್ವಜ ವಿನ್ಯಾಸಗೊಳಿಸಲು ಡಾ. ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ತಾತ್ಕಾಲಿಕ ಧ್ವಜ ಸಮಿತಿಯನ್ನು ರಚಿಸಲಾಯಿತು. ಗಾಂಧೀಜಿಯವರ ಒಪ್ಪಿಗೆ ಪಡೆದು ಪಿಂಗಳಿ ವೆಂಕಯ್ಯನವರು ಚರಕಕ್ಕೆ ಬದಲಾಗಿ ಅಶೋಕನ ಸಾರಾನಾಥ ಸ್ತಂಭದ ಲಾಂಛನವಾದ ಚಕ್ರದ ಜೊತೆಗೆ ಯಾವುದೇ ಸಾಮುದಾಯಿಕ ಬಣ್ಣವನ್ನು ಹೊಂದಿರದ ರಾಷ್ಟ್ರಧ್ವಜವನ್ನು ಜುಲೈ 22 1947ರಂದು ಸರ್ವಾನುಮತದಿಂದ ಅಂಗೀಕರಿಸ ಲಾಯಿತು.
ರಾಜಾಡಳಿತದಿಂದ ಪ್ರಜೆಗಳೇ ಪ್ರಭುವಾದ ಪ್ರಜಾಪ್ರಭುತ್ವ ಆಡಳಿತವಾಗಿ ಪರಿವರ್ತನೆಗೊಂಡು ನಮ್ಮ ದೇಶದ ಜನರ ಅಭಿವೃದ್ಧಿಗೆ ಅಗತ್ಯವಾದಂತಹ ಸಂವಿಧಾನದ ಹಕ್ಕುಗಳನ್ನು ರೂಪಿಸಿಕೊಂಡು, ಚಾಚಾ ನೆಹರೂ ನೇತೃತ್ವದಲ್ಲಿ ಆರಂಭವಾದ ಸ್ವಾತಂತ್ರ್ಯದ ಆಡಳಿತಕ್ಕೆ ಇಂದು ಎಪ್ಪತ್ತೈದರ ಸಂಭ್ರಮ! ಏಳು ತಲೆಮಾರುಗಳು ಬದಲಾಗಿವೆ. ಅನೇಕ ನಾಯಕರು ಆಳಿ ಹೋಗಿದ್ದಾರೆ. ಜನ ಜೀವನ ಬದಲಾಗಿದೆ. ಆದರೆ ಬದಲಾಗದೇ ಉಳಿದಿರುವುದು ಮಾತ್ರ ಒಂದೇ! ಅದು ಭಾರತದ ತ್ರಿವರ್ಣ ಧ್ವಜ!
ಮನೆಮನೆಗಳಲ್ಲಿ ಏರುತ್ತಾ ಹಾರುತ್ತಿರಲಿ ಹೆಮ್ಮೆಯಿಂದ, ಭಾರತೀಯತೆಯ ಭಾವೈಕ್ಯದ ಭಾವನೆಯಿಂದ!