Monday, 12th May 2025

ಲೆಜೆಂಡ್ಸ್​​ ಕ್ರಿಕೆಟ್ ಲೀಗ್​: ಮಹರಾಜಸ್​ ತಂಡಕ್ಕೆ ’ದಾದಾ’ ನಾಯಕ

ಕೋಲ್ಕತ್ತಾ: ಸೆಪ್ಟೆಂಬರ್​​ 16ರಂದು ಈಡನ್ ಗಾರ್ಡನ್ ಮೈದಾನದಲ್ಲಿ ಲೆಜೆಂಡ್ಸ್​​ ಕ್ರಿಕೆಟ್ ಲೀಗ್​ನ ಎರಡನೇ ಆವೃತ್ತಿ ನಡೆಯ ಲಿದೆ. ಭಾರತದ ಮಹರಾಜಸ್​ ತಂಡಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ನಾಯಕರಾಗಿದ್ದಾರೆ.

ಟೂರ್ನಿಯಲ್ಲಿ ನಾಲ್ಕು ತಂಡಗಳು ಭಾಗಿಯಾಗಲಿದ್ದು, 10 ದೇಶದ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಎರಡನೇ ಸೀಸನ್​ನಲ್ಲಿ ಒಟ್ಟು 15 ಪಂದ್ಯಗಳು ನಡೆಯ ಲಿವೆ. ಇಂಡಿಯಾ ಮಹಾರಾಜಸ್ ತಂಡದಲ್ಲಿ ಭಾರತದ ಸೆಹ್ವಾಗ್​, ಕೈಫ್​, ಎಸ್​ ಶ್ರೀಶಾಂತ್​ ಸೇರಿದಂತೆ ಮಾಜಿ ಆಟಗಾರರಿದ್ದಾರೆ.

ರೆಸ್ಟ್​​ ಆಫ್​ ದಿ ವರ್ಲ್ಡ್​​ ತಂಡದೆದುರು ತಮ್ಮ ಮೊದಲ ಪಂದ್ಯ ಆಡಲಿದೆ. ಈ ತಂಡದ ನಾಯಕತ್ವ ಜವಾಬ್ದಾರಿಯನ್ನು ಇಂಗ್ಲೆಂಡ್​​ನ ಇಯಾನ್ ಮಾರ್ಗನ್​ ವಹಿಸಿಕೊಂಡಿದ್ದಾರೆ.

ಭಾರತ ಮಹರಾಜಸ್​ ತಂಡ: ಸೌರವ್ ಗಂಗೂಲಿ (ಕ್ಯಾಪ್ಟನ್​​), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಎಸ್ ಬದ್ರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಪ್ರಗ್ಯಾನ್ ಓಜಾ, ಅಜಯ್ ಜಡೇಜಾ, ಶರ್ಮಾ ಸಿಂಗ್ ಹಾಗು ಜೋಗಿಂದರ್.

ರೆಸ್ಟ್ ಆಫ್ ದಿ ವರ್ಲ್ಡ್ ತಂಡ: ಇಯಾನ್ ಮಾರ್ಗನ್ (ನಾಯಕ), ಹರ್ಷಲ್ ಗಿಬ್ಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಯರ್, ಲೆಂಡ್ಲ್ ಸಿಮನ್ಸ್, ಜಾಕ್ವೆಸ್ ಕಾಲಿಸ್, ನಾಥನ್ ಮೆಕಲಮ್, ಜಾಂಟಿ ರೋಡ್ಸ್, ಮುಶ್ರಫೆ ಮೊರ್ತಜಾ, ಅಸ್ಗರ್ ಅಫ್ಘಾನ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇಯ್ನ್, ಹ್ಯಾಮಿಲ್ಟನ್ ಒ ಬ್ರೆಟ್ಟಾಬ್ಜಾ, ದಿನೇಶ್ ರಾಮ್ದಿನ್ ಮತ್ತು ಮಿಚೆಲ್ ಜಾನ್ಸನ್.