Sunday, 11th May 2025

ಕುಟುಂಬಕ್ಕೆ ಸಾಂತ್ವನ

ಕೋಲಾರ: ಎಮ್ಮೆಗಳನ್ನು ಮೇಯಿಸಲು ಹೋದ ಸಂದರ್ಭ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಸಾವಿಗಿಡಾಗಿದ್ದ ಪಟ್ಟಣದ ನಂದಪ್ಪ ಸಂಗಪ್ಪ ಸೊನ್ನದ(೬೫) ಅವರ ಮನೆಗೆ ಶಾಸಕ ಶಿವಾನಂದ ಪಾಟೀಲ್ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಕೂಡಲೇ ಸರಕಾರದಿಂದ ಪರಿಹಾರವನ್ನು ಕೊಡಿಸಲಾಗುವುದು ಎಂದು ಹೇಳಿದರು. ಮಾಜಿ ಜಿ.ಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಸಿ.ಎಸ್ ಗಿಡ್ಡಪ್ಪಗೋಳ ಇತರರು ಇದ್ದರು.