Sunday, 11th May 2025

ಬೊಮ್ಮಾಯಿಗೆ ಕರೋನಾ: ದೆಹಲಿ ಪ್ರವಾಸ ರದ್ದು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಶನಿವಾರ ಕೋವಿಡ್‌ 19 ದೃಢಪಟ್ಟಿದ್ದು, ತಮ್ಮ ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಬೊಮ್ಮಾಯಿ ಶನಿವಾರ ಸಂಜೆ ದೆಹಲಿಯಲ್ಲಿ ನಡೆಯಲಿದ್ದ ಅಜಾದಿ ಕಾ ಅಮೃತ್‌ ಮಹೋತ್ಸವದ ರಾಷ್ಟ್ರೀಯ ಸಮಿತಿಯ 3ನೇ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಕೋವಿಡ್‌ 19 ದೃಢವಾಗಿರುವುದರಿಂದ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ.

ನನಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿದ್ದೇನೆ. ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ. ನನ್ನ ದೆಹಲಿಯ ಪ್ರವಾಸ ರದ್ಧಾಗಿದೆ ಎಂದು ಬೊಮ್ಮಾಯಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯುವ ನೀತಿ ಆಯೋಗದ 7ನೇ ಸಭೆಯಲ್ಲೂ ಭಾಗವಹಿಸಬೇಕಿತ್ತು.