Wednesday, 14th May 2025

ಮನೆಗೆ ನುಗ್ಗಿ ಮಹಿಳೆಯ ಅಪಹರಣ: ಮೂವರ ಬಂಧನ

ಚೆನ್ನೈ: ಮಹಿಳೆಯೋರ್ವಳನ್ನು 15 ಜನರು ಆಕೆಯ ನಿವಾಸದಿಂದ ಅಪಹರಿಸಿರುವ ಘಟನೆ ತಮಿಳುನಾಡಿನ ಮೈಲಾಡುತುರೈ ನಲ್ಲಿ ನಡೆದಿದೆ.

ಸುಮಾರು 15 ಮಂದಿ ದುಷ್ಕರ್ಮಿಗಳು ಏಕಾಏಕಿ ಮಹಿಳೆಯ ಮನೆಗೆ ನುಗ್ಗಿ ಕುಟುಂಬಸ್ಥ ರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ಅಪಹರಣ ಮಾಡಿದ್ದಾರೆ. ಮನೆಯ ಗೇಟ್​ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಘಟನೆ ಸೆರೆಯಾಗಿದೆ. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಿದ್ದು, ಮಹಿಳೆಯನ್ನು ರಕ್ಷಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾದ ವಿಘ್ನೇಶ್ವರನ್ (34) ಮಹಿಳೆಯೊಂದಿಗೆ ಸ್ನೇಹ ಬೆಳೆಸಿ ಅವಳನ್ನು ಹಿಂಬಾಲಿಸಲು ಪ್ರಾರಂಭಿಸಿದ್ದನು ಎನ್ನಲಾಗುತ್ತಿದೆ.

ಮಾಹಿತಿ ಪಡೆದ ಮೈಲಾಡುತುರೈ ಪೊಲೀಸರು ತಕ್ಷಣ ಶೋಧ ತಂಡವನ್ನು ರಚಿಸಿದ್ದರು. ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ ಮಾಡಿ ಪೊಲೀಸ್​ ತಂಡ ವಿಘ್ನೇಶ್ವರನ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದೆ ಎನ್ನಲಾಗುತ್ತಿದೆ.

ಘಟನೆ ಸಂಬಂಧ ಮಹಿಳೆ ವಿಘ್ನೇಶ್ವರನ್‌ಗೆ ಮೈಲಾಡುತುರೈ ಪೊಲೀಸರಿಗೆ ದೂರು ನೀಡಿದ್ದರು. ಜುಲೈ 12 ರಂದು ವಿಘ್ನೇಶ್ವರನ್ ಮಹಿಳೆಯನ್ನು ಅಪಹರಿಸಲು ಪ್ರಯತ್ನಿಸಿದ್ದನು.