Sunday, 18th May 2025

ವಿದ್ಯಾವಾರಿಧಿ ಶಾಲೆಗೆ ಶಿಕ್ಷಣ ಚೇತನ ಪ್ರಶಸ್ತಿ

ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ಸಮೀಪದ ದುಗುಡಿಹಳ್ಳಿಯಲ್ಲಿರುವ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ೨೦೨೨ ನೇ ಸಾಲಿನ ಶಿಕ್ಷಣ ಚೇತನ ಪ್ರಶಸ್ತಿ ಪಡೆದಿದೆ.

ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯ ಮಟ್ಟದ ಉತ್ತಮ ಶಾಲೆಗೆ ಕೊಡಮಾಡುವ ಪ್ರಶಸ್ತಿ ಇದಾಗಿದ್ದು ಭಾನುವಾರ ತುಮಕೂರಿನ ಉದ್ದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸಮಾರಂಭವನು ಆಯೋಜಿಸಲಾಗಿತ್ತು. ನಮ್ಮ ಶಾಲೆಯಲ್ಲಿರುವ ಶೈಕ್ಷಣಿಕ ವಾತಾವರಣ, ನಾವು ನೀಡುತ್ತಿರುವ ಗುಣತ್ಮಾಕ ಶಿಕ್ಷಣಕ್ಕೆ ಮೆಚ್ಚಿ ಈ ಪ್ರಶಸ್ತಿ ಬಂದಿದೆ. ಎಂದು ಮುಖ್ಯ ಶಿಕ್ಷಕ ಶ್ರೀಕಾಂತ್ ಹರ್ಷ ವ್ಯಕ್ತಪಡಿಸಿದರು.