Wednesday, 14th May 2025

ಡಬಲ್ ಡೆಕ್ಕರ್ ಬಸ್‌ಗೆ ಬಸ್ ಡಿಕ್ಕಿ: ಎಂಟು ಮಂದಿ ಸಾವು

ಬಾರಾಬಂಕಿ: ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ದೆಹಲಿಗೆ ಹೊರಟಿದ್ದ ಡಬಲ್ ಡೆಕ್ಕರ್ ಬಸ್ ನಿಂತಿದ್ದ ಮತ್ತೊಂದು ಡಬಲ್ ಡೆಕ್ಕರ್ ಬಸ್‌ಗೆ ಡಿಕ್ಕಿ ಹೊಡೆದ ಪರಿ ಣಾಮ ಎಂಟು ಜನರು ಮೃತಪಟ್ಟು, 16 ಮಂದಿ ಗಾಯಗೊಂಡಿದ್ದಾರೆ.

ಬಿಹಾರದ ಸೀತಾಮರ್ಹಿಯಿಂದ ಬರುತ್ತಿದ್ದ ಬಸ್ ನರೇಂದ್ರಪುರ ಮದ್ರಹಾ ಗ್ರಾಮದ ಬಳಿ ನಿಂತಿದ್ದ ಬಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಬಾರಾಬಂಕಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮನೋಜ್ ಪಾಂಡೆ ಹೇಳಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯ ಗೊಂಡವರನ್ನು ಲಖನೌ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಮೃತರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದಾರೆ.