Monday, 12th May 2025

ದ್ರೌಪದಿ ಮುರ್ಮುಗೆ ಎಸ್’ಬಿಎಸ್’ಪಿ ಬೆಂಬಲ

ಲಕ್ನೊ: ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸು ವುದಾಗಿ ಉತ್ತರಪ್ರದೇಶದಲ್ಲಿ ಸಮಾಜ ವಾದಿ ಪಕ್ಷದ ಮಿತ್ರ ಪಕ್ಷ ಸುಹೇಲ್ ದೇವ್ ಭಾರತೀಯ ಸಮಾಜ್ ಪಾರ್ಟಿ ನಾಯಕ ಓಂ ಪ್ರಕಾಶ್ ರಾಜ್‌ಭರ್ ಹೇಳಿದ್ದಾರೆ.

ರಾಜ್‌ಭರ್ ಅವರು ಆಡಳಿತ ಪಕ್ಷದ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವ ಮೂಲಕ ಪ್ರತಿಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾ ಅವರ ಅಭಿಯಾನಕ್ಕೆ ಶುಕ್ರವಾರ ಮತ್ತೊಂದು ಹಿನ್ನಡೆ ಎದುರಾಯಿತು.

ರಾಜ್ ಭರ್ ಅವರು ಮುರ್ಮುವಿಗೆ ಬೆಂಬಲ ನೀಡಿದ ಮತ್ತೊಂದು ವಿಪಕ್ಷ ನಾಯಕನಾಗಿ ದ್ದಾರೆ.

ಈ ವಾರದ ಆರಂಭದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಕಾಂಗ್ರೆಸ್ ಮಿತ್ರಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ, ಜಾರ್ಖಂಡ್ ಮುಖ್ಯ ಮಂತ್ರಿ ಹೇಮಂತ್ ಸೊರೆನ್ ಕೂಡ ಮುರ್ಮುವಿಗೆ ಬೆಂಬಲ ನೀಡುವುದಾಗಿ ಘೋಷಿಸಿ ದ್ದರು.