Thursday, 15th May 2025

ಎನ್‌ಡಿಎ ಅಭ್ಯರ್ಥಿ ದ್ರೌಪದಿಗೆ ಸಮಾಜವಾದಿ ಪಕ್ಷದ ಬೆಂಬಲ

ಲಖನೌ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಾಗಿ ಸಮಾಜವಾದಿ ಪಕ್ಷದ ಮಿತ್ರಪಕ್ಷಗಳಾದ ಓಂ ಪ್ರಕಾಶ್ ರಾಜ್‌ಭರ್ ಮತ್ತು ಶಿವಪಾಲ್ ಯಾದವ್ ಘೋಷಿಸಿ ದ್ದಾರೆ.

ಜನಸತ್ತಾ ದಳದ ನಾಯಕ ‘ರಾಜಾ ಭಯ್ಯಾ’ ಮತ್ತು ಬಿಎಸ್‌ಪಿ ನಾಯಕ ಉಮಾ ಶಂಕರ್ ಸಿಂಗ್ ಕೂಡ ಮುರ್ಮುಗೆ ಬೆಂಬಲ ನೀಡಲಿದ್ದಾರೆ. ಕಳೆದ ದಿನ ದ್ರೌಪದಿ ಮುರ್ಮು ಲಕ್ನೋಗೆ ಆಗಮಿಸಿದ್ದು, ಅಲ್ಲಿನ ಬಿಜೆಪಿ ಮತ್ತು ಮಿತ್ರಪಕ್ಷಗಳಿಂದ ಬೆಂಬಲ ಕೋರಿದ್ದರು.

ಎನ್‌ಡಿಎ ಅಭ್ಯರ್ಥಿ ಗೌರವಾರ್ಥವಾಗಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಔತಣಕೂಟವನ್ನು ಆಯೋಜಿಸಿ ದ್ದರು. ಈ ಸಂದರ್ಭದಲ್ಲಿ ಎಸ್‌ಪಿ ಮುಖ್ಯಸ್ಥ ಓಂಪ್ರಕಾಶ್ ರಾಜ್‌ಭರ್, ಶಿವಪಾಲ್ ಯಾದವ್, ರಾಜಾ ಭಯ್ಯಾ ಮತ್ತು ಬಿಎಸ್‌ಪಿ ಶಾಸಕರು ಭಾಗವಹಿಸಿದ್ದರು.

“ಬುಡಕಟ್ಟು ಸಮಾಜದಲ್ಲಿ ಜನಿಸಿದ ಮಹಿಳೆಯೊಬ್ಬರು ಬೆಂಬಲ ಪಡೆಯಲು ನಿಮ್ಮ ಮುಂದೆ ಬಂದಿದ್ದಾರೆ” ಎಂದು ಹೇಳಿದರು. ನಾನು ದುರ್ಬಲ ವರ್ಗಗಳು ಮತ್ತು ಬುಡಕಟ್ಟು ಸಮಾಜಕ್ಕಾಗಿ ಜೀವಮಾನವಿಡೀ ದುಡಿದಿದ್ದೇನೆ. ನಿಮ್ಮೆಲ್ಲರ ಬೆಂಬಲ ನನಗೆ ಸಿಗುವ ವಿಶ್ವಾಸವಿದೆ” ಎಂದು ಹೇಳಿದರು.

ದ್ರೌಪದಿ ಮುರ್ಮು ಅವರಿಗೆ ವಿಪಕ್ಷ ನಾಯಕರ ಬೆಂಬಲ ಬಹಳ ಮುಖ್ಯ ಎಂಬುದು ಇಲ್ಲಿ ಉಲ್ಲೇಖಾರ್ಹ. ಏಕೆಂದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ವಿಪಕ್ಷ ಪಾಳಯ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುತ್ತಿದೆ.