Wednesday, 14th May 2025

ಕ್ರೂಸರ್- ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು

ಕಮಲಾಪುರ: ತಾಲ್ಲೂಕಿನ ಭಿಮನಾಳ ಕ್ರಾಸ್ ಬಳಿ ಕ್ರೂಸರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ತೆಲಂಗಾಣ ರಾಜ್ಯದ ಹನಮಕೊಂಡಾ ನಗರದ ಉಜಲಿಬೇಸ ನಿವಾಸಿ ಮಹ ಮ್ಮದ್ ಅಬ್ದುಲ್ ಮಜೀದ ಸಿದ್ದಿಖಿ (71) ಮತ್ತು ಹೈದರಾಬಾದ್‌ನ ಬಾಲಾಜಿ ನಗರದ ಸಾದಯಾ ಖುನ್ನಿಸಾ ಬೇಗಂ (55) ಮೃತರು.

ಹುಸೇನ್(7) ಅವರ ಸ್ಥಿತಿ ಚಿಂತಾಜನಕವಾಗಿದ್ದು, ಗಂಭೀರವಾಗಿ ಗಾಯಗೊಂಡ ಫರಹತ್ ಸುಲ್ತಾನಾ, ಅರ್ಜುನ್ ಇಂತಿಮಾ ಸುಲ್ತಾನ್ ಅವರನ್ನು ಕಲಬುರಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ಕಾರುಗಳ ಮೂಲಕ ಕಲಬುರಗಿಯ ಸ್ವಾಜಾ ಬಂದೇ ನವಾಜ್ ದರ್ಗಾ ದರ್ಶನಕ್ಕೆ ತೆರಳುತ್ತಿದ್ದರು. ಕಲಬುರಗಿಯಿಂದ ಬೀದರ್‌ನ ಗುರುನಾನಕ್‌ಗೆ ತೆರಳುತ್ತಿದ್ದ ಕ್ರೂಸರ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.