Saturday, 10th May 2025

ಮಡಿಕೇರಿ ಹಲವೆಡೆ ಲಘು ಭೂಕಂಪನ

ಕೊಡಗು: ಮಡಿಕೇರಿ ತಾಲೂಕಿನ ಹಲವೆಡೆ ಮಂಗಳವಾರ ಲಘು ಭೂಕಂಪನ ಸಂಭವಿಸಿದ್ದು, ಸುಳ್ಯ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದೆ. ಜನತೆ ಬೆಚ್ಚಿ ಬಿದ್ದಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಸಮೀಪ ಭೂಕಂಪನ ಉಂಟಾಗಿದ್ದು ರಿಕ್ಟರ್ ಸ್ಕೇಲ್‌ನಲ್ಲಿ ಭೂ ಕಂಪನದ ತೀವ್ರತೆ 3.0 ದಾಖಲಾಗಿದೆ.

ಮಂಗಳವಾರ ಬೆಳಗ್ಗೆ 7 ಗಂಟೆ 45 ನಿಮಿಷ 47 ಸೆಕೆಂಡಿಗೆ ಈ ಭೂಕಂಪನ ದಾಖಲಾಗಿದೆ. 5.2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿ ಸಿದ್ದು, ಇದರ ಪ್ರಭಾವದಿಂದ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ಕೊಡಗು ಜಿಲ್ಲೆಯ ಕೊಡಗು ಸಂಪಾಜೆ, ಚೆಂಬು, ಕರಿಕೆ, ಪೆರಾಜೆ ಪ್ರದೇಶ ಸೇರಿ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ವರದಿ ತಿಳಿಸಿದೆ.

ಜೂ.25ರಂದು ಸಂಭವಿಸಿದ ಭೂಕಂಪನ ಕರಿಕೆ ಸಮೀಪದಲ್ಲಿ ಸಂಭವಿಸಿದ್ದು, ರಿಕ್ಟರ್ ಸ್ಕೇಲ್‌ನಲ್ಲಿ 2.3 ದಾಖಲಾಗಿತ್ತು.