Thursday, 15th May 2025

ತೈವಾನ್‌ನಲ್ಲಿ 6.0 ತೀವ್ರತೆ ಭೂಕಂಪ

ತೈವಾನ್‌: ತೈವಾನ್‌ನಲ್ಲಿ ಸೋಮವಾರ ತೀವ್ರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ.

ಭೂಕಂಪವು ಅಂದಾಜು 10 ಕಿಲೋಮೀಟರ್ (6.2 ಮೈಲುಗಳು) ಆಳವನ್ನು ಹೊಂದಿದೆ. ತೈವಾನ್‌ನ ಪೂರ್ವದಲ್ಲಿರುವ ಹುವಾಲಿಯನ್ ನಗರದ ದಕ್ಷಿಣಕ್ಕೆ 38 ಕಿಲೋಮೀಟರ್‌ ಗಳಷ್ಟು ಅಪ್ಪಳಿಸಿತು. ಅರ್ಧ ಗಂಟೆಯ ನಂತರ ಎರಡನೇ ಕಂಪನ ಸಂಭವಿಸಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಹಾಗೂ ತೈವಾನ್ ಇಲಾಖೆ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ.

ದ್ವೀಪವು ಎರಡು ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನ ಸಮೀಪದಲ್ಲಿದೆ, ತೈವಾನ್ ನಿಯ ಮಿತವಾಗಿ ಭೂಕಂಪಗಳಿಂದ ಹಾನಿ ಗೊಳಗಾಗುತ್ತದೆ. 2016 ರಲ್ಲಿ ದಕ್ಷಿಣ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರೆ, 1999 ರಲ್ಲಿ 7.3 ತೀವ್ರತೆಯ ಭೂಕಂಪದಲ್ಲಿ 2,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.