Tuesday, 13th May 2025

ಅಪ್ಪನೆಂದರೆ ಅಮ್ಮನ ಹಣೆಯಲ್ಲಿ ನಗುವ ಕುಂಕುಮ !

ಯಶೋ ಬೆಳಗು 

yashomathy@gmail.com

ನಮ್ಮ ನಾಡಿಗೆ father’s day ಯ ಅಗತ್ಯವಾದರೂ ಏನಿದೆ? ಎನ್ನುವ ಪ್ರಶ್ನೆ ಎದುರಾಗುವುದು ಸಹಜವೇ. ಏಕೆಂದರೆ ಅಪ್ಪ-ಅಮ್ಮನಿಂದ ದೂರವಿದ್ದೇ ಗೊತ್ತಿಲ್ಲ ನಮಗೆಲ್ಲ. ಆದರೆ ವಿದ್ಯಾಭ್ಯಾಸ, ಉದ್ಯೋಗ, ವಿವಾಹದ ಕಾರಣ ಗಳಿಂದಾಗಿ ಅಪ್ಪ-ಅಮ್ಮಂದಿರಿಂದ ದೂರ ಉಳಿದು ಹೋದ ಜೀವಗಳಿಗೆ ಸಂಭ್ರಮಿಸಲು ಹೆತ್ತ ಮನಸುಗಳಿಗೆ ಖುಷಿ ಕೊಡಲು ಇದೊಂದು ಸದವ ಕಾಶ.

ಅಪ್ಪನೆಂದರೆ ಆಪದ್ಬಾಂಧವ, ಅಪ್ಪನೆಂದರೆ ಆತ್ಮ ವಿಶ್ವಾಸ, ಅಪ್ಪನೆಂದರೆ ಫ್ರೆಂಡ್, ಫಿಲಾಸಫರ್ ಅಂಡ್ ಗೈಡ್, ಅಪ್ಪನೆಂದರೆ ಸಮಾಜದಲ್ಲಿನ ಗೌರವ, ಅಪ್ಪನೆಂದರೆ ಅಮ್ಮನ ಹಣೆಯ ಮೇಲಿನ ಕುಂಕುಮ, ಅಪ್ಪನೆಂದರೆ ಆಕಾಶ, ಅಪ್ಪನೆಂದರೆ ರಕ್ಷಕ, ಅಪ್ಪ ನೆಂದರೆ ಹೆಸರು, ಅಪ್ಪನೆಂದರೆ ಪ್ರತಿಷ್ಠೆ, ಅಪ್ಪನೆಂದರೆ ಆಡಂಬರ, ಅಪ್ಪನೆಂದರೆ ಜೀವನ, ಅಪ್ಪನೇ ಸರ್ವಸ್ವ ಅನ್ನುವುದರ ಜತೆಜತೆಗೆ ಅಪ್ಪನೆಂದರೆ ಭಯ ಅನ್ನುವುದೂ ಅಷ್ಟೇ ಸತ್ಯ!

ನನ್ನಪ್ಪ ನನ್ನನ್ನು ಅಪ್ಪಿ ಮುದ್ದಾಡಿದ ನೆನಪೇ ಇಲ್ಲ. I never know his touch. ಹಾಗಂತ ಅವರಿಗೆ ನನ್ನ ಮೇಲೆ ಪ್ರೀತಿ-ಮಮತೆ ಯಿರಲಿಲ್ಲವೆಂದರ್ಥವಲ್ಲ. ಅದು ಅವರ ಸ್ವಭಾವ. ಹೊಡೆದದ್ದು, ಬೈದಿದ್ದು, ಗದರಿದ್ದು, ಅಶ್ಲೀಲವಾಗಿ ಮಾತಾಡಿದ್ದು, ಶಪಿಸಿದ್ದು, ಯಾಕಾ ದರೂ ಹೆಣ್ಣುಮಗು ಹುಟ್ಟಿತೋ ಎಂದು ಹಲುಬಿದ್ದು, ಕುಡಿದದ್ದು, ಸಿಗರೇಟು ಸೇದಿದ್ದು, ಉಹುಂ ನೆನಪೇ ಇಲ್ಲ. ಗಣೇಶ್ ಬೀಡಿ ತುಂಬ ಸೇದುತ್ತಿದ್ದರು ಅನ್ನೋದು ಕೇಳಿ ಗೊತ್ತೇ ಹೊರತು ನೋಡಿದ ನೆನಪಿಲ್ಲ. ಆದರೂ ಅಪ್ಪ ಅಂದ್ರೆ ಭಯ! ಬೈದು ಬಿಡ್ತಾರೇನೋ ಅನ್ನುವ ಭಯ.

ಸಿಟ್ಟು ಮಾಡಿಕೊಳ್ತಾರೇನೋ ಅನ್ನುವ ಭಯ. ನೊಂದುಕೊಳ್ತಾರೇನೋ ಅನ್ನುವ ಭಯ. ಅಪ್ಪ ಅಂದ ಕೂಡಲೇ ನೆನಪಾಗೋದು ಅವರ ಕಟ್ಟುನಿಟ್ಟಿನ ಮಾತುಗಳು, ಅವರ ಶ್ರಮಜೀವನ. ಅವರು ಇಷ್ಟಪಟ್ಟು ನೋಡುತ್ತಿದ್ದ ಸಿನೆಮಾಗಳು. ವರ್ಷಕ್ಕೊಮ್ಮೆ ತಪ್ಪದೇ ಭೇಟಿ ನೀಡುತ್ತಿದ್ದ ನಂಜನಗೂಡು ಹಾಗೂ ಧರ್ಮಸ್ಥಳದಂಥ ತೀರ್ಥಸ್ಥಳಗಳು!

ಹುಡುಕಾಡಿದರೆ ಸಿಗುವ ಅಪರೂಪದ ಅವರ ಒಂದೆರಡು -ಟೋಗಳು, ಪಾರ್ಶ್ವವಾಯು ಹಾಗೂ ಅಲ್ ಝೈಮರ್ ಎನ್ನುವ ಮರೆವಿನ ಖಾಯಿಲೆ. ಆದರೆ, ಅಪ್ಪ ಇಂದಿಗೂ ಜೀವಂತವಾಗಿzರೆ. ಅಮ್ಮನ ಮಾತುಗಳಲ್ಲಿ. ನಮ್ಮ ನೆನಪುಗಳಲ್ಲಿ! ನನ್ನೊಳಗೆ ಹರಿಯು ತ್ತಿರುವ ಕಣಕಣವೂ ಅವರ ಕೊಡುಗೆಯೇ ಅಲ್ಲವೇ? ಹೀಗಾಗಿ ಅಪ್ಪ ಎಲ್ಲೂ ಹೋಗಿಲ್ಲ; ಅವರು ನನ್ನೊಳಗೇ
ಇದ್ದಾರೆ, ನನ್ನ ದೇಹದ ಪ್ರತಿ ಕಣದಲ್ಲೂ ಜೀವಂತವಾಗಿ!

ಅದನ್ನೇ ಮಗನಿಗೂ ಹೇಳುತ್ತೇನೆ. Find the appa within you. He is there always with you as your body and mind. He will
continue generation to generation through you. So Be good to yourself and also others. ಎಂದು. ಮಕ್ಕಳು ತಮ್ಮ ಮಾತನ್ನು ಕೇಳುವಂತೆ ಮಾಡಲು ಅಮ್ಮಂದಿರು ತಮ್ಮ ಬತ್ತಳಿಕೆಯಿಂದ ಬಳಸುವ ಕೊನೆಯ ಅಸವೆಂದರೆ ‘ಅಪ್ಪಂಗೆ ಹೇಳ್ತೀನಿ ನೋಡು’ ಅನ್ನುವ ಮಂತ್ರ!

ಸ್ನೇಹಿತರೊಡನೆ ಜಟಾಪಟಿಯಾದರೆ ಮೊದಲು ಬರುವ ಹೆದರಿಸುವ ಮಾತೆಂದರೆ ‘ನಮ್ಮಪ್ಪಂಗೆ ಹೇಳ್ತೀನಿ’ ಅನ್ನುವ ಮಾತುಗಳು. ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಅಪ್ಪನೆಂದರೆ ಅಮ್ಮನಿಗಿಂತ ಸ್ವಲ್ಪ ಜಾಸ್ತೀನೇ ಇಷ್ಟ. ತಾವು ಮದುವೆಯಾಗುವ ಹುಡುಗನಲ್ಲೂ ತನ್ನಪ್ಪನ ಹೋಲಿಕೆಯನ್ನು ಹುಡುಕುತ್ತಾರೆ. ಏಕೆಂದರೆ ತನ್ನ ಮಗುವಿನ ತಂದೆಯಾಗುವ ಹುಡುಗ ತನ್ನಪ್ಪನಂತೆಯೇ ತನ್ನ ಮಕ್ಕಳನ್ನು ಆರೈಕೆ ಮಾಡುವಂಥವನಾಗಿರಲಿ ಎನ್ನುವ ಹಂಬಲ. ಎಷ್ಟೋ ಸಲ ಅಮ್ಮನ ಪ್ರೀತಿಯನ್ನೂ ಮರೆಸುವಂಥಾ ಪ್ರೀತಿ, ಅಕ್ಕರೆ ತೋರುವ, ಮೃದು ಮನಸಿನ ಜವಾಬ್ದಾರಿಯುತ ತಂದೆಯರಂತೆಯೇ ಕಠೋರ ಮನಸಿನ ದಬ್ಬಾಳಿಕೆ, ದೌರ್ಜನ್ಯ, ಬೇಜವಾ ಬ್ದಾರಿತನದ ಜತೆಗೆ ಹೆಸರೇ ಕೊಡದೆ ದೂರ ಉಳಿದು ಹೋದ ಅಪ್ಪಂದಿರೂ ನಮ್ಮ ನಡುವೆ ಸಾಕಷ್ಟು ಕಾಣುತ್ತಾರೆ.

ಅಪ್ಪನಿಗೂ ದುಃಖವಾಗುತ್ತೆ. ನೋವಾಗುತ್ತೆ, ಬೇಸರವಾಗುತ್ತೆ, ಒಂಟಿತನ ಅಭದ್ರತೆ ಕಾಡುತ್ತದೆ ಅನ್ನುವ ವಿಷಯಗಳನ್ನು ನಾವೆಲ್ಲ ಮರೆತೇ ಹೋಗಿರುತ್ತೇವೆ. ನಮಗಾಗಿ ಕಷ್ಟಪಡುವ, ಕೇಳಿದ್ದನ್ನೆಲ್ಲ ಕೊಡಿಸುವ, ನಮ್ಮನ್ನು ತಣ್ಣಗೆ ಮಲಗಿಸಿ ಹಗಲು-ರಾತ್ರಿಯೆ ನ್ನದೇ ದುಡಿಯುವ ಅಪ್ಪ ನೆಂದರೆ ನಮ್ಮ ಕಣ್ಣಲ್ಲಿ the strong man always!

ಹೆಂಡತಿಯ ಮಾತಿಗೆ ಕಟ್ಟುಬಿದ್ದು ಮಗನನ್ನು ಕಾಡಿಗಟ್ಟುವ ಅಸಹಾಯಕ ದಶರಥ, ತನ್ನ ಪ್ರೇಮಕ್ಕಾಗಿ ಮಗನ ಭವಿಷ್ಯವನ್ನೇ ಬಲಿ ತೆಗೆದುಕೊಂಡ ಶಂತನು, ನ್ಯಾಯ-ಅನ್ಯಾಯದ ವಿಚಕ್ಷಣೆಯನ್ನು ಮರೆತು ಪುತ್ರ ಪ್ರೇಮದಿಂದಾಗಿ ಮನಸಿನಿಂದಲೂ ಅಂಧನಾಗಿ ಹೋದ ಧೃತರಾಷ್ಟ್ರ! ಮೋಸ ಹೋದೆನೆಂಬ ಭಾವದಿಂದ ಕುದಿಯುತ್ತ ಮಗುವಿನ ಮುಖವನ್ನೂ ನೋಡದೇ ಸಂಬಂಧ ಕಳಚಿಕೊಂಡ ವಿಶ್ವಾಮಿತ್ರ, ತನ್ನ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡನೆಂಬ ಕಾರಣಕ್ಕೆ ಮಗನೆಂಬ ಮಮಕಾರ ವನ್ನೂ ಮರೆತು ಕೊಲ್ಲಲು ಆeಪಿಸುವ ಹಿರಣ್ಯಕಶಿಪು, ಚಿರಯೌವನದ ಅಪೇಕ್ಷೆಯಿಂದ ಮಗನನ್ನು ವೃದ್ಧಾಪ್ಯಕ್ಕೆ ದೂಡಿದ ಯಯಾತಿಯಂಥ ತಂದೆಯರನ್ನೂ ನಾವು ಪುರಾಣದ ಪಾತ್ರಗಳಲ್ಲಿ ನಾವು ಕಂಡಿದ್ದೇವೆ.

ತಂದೆ-ಮಗಳ ನವಿರಾದ ಬಾಂಧವ್ಯಕ್ಕೆ ಜೀವ ತುಂಬುವಂತಿರುವ ‘ನಿನ್ನಂಥ ಅಪ್ಪ ಇಲ್ಲ…’ ಎನ್ನುವ ಹಾಡಿಗೆ ಸುಧಾರಾಣಿ ಯೊಂದಿಗೆ ಹೆಜ್ಜೆಹಾಕುವ ಹೊತ್ತಿಗೆ ಡಾ.ರಾಜಕುಮಾರ್‌ರಿಗೆ ಸರಿಸುಮಾರು ಅರವತ್ತಾಗಿತ್ತೇನೋ ವಯಸ್ಸು. ಅಲ್ಲಿಯವರೆಗೆ ಅಪ್ಪನ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದವರು ನಮ್ಮ ಕೆ.ಎಸ್.ಅಶ್ವತ್ಥ್! ಅವರ ತುಂಬು ಗಾಂಭೀರ್ಯದ ಮುಖ, ವಾತ್ಸಲ್ಯಭರಿತ ಭಾವ, ತಿಳಿಹಾಸ್ಯ, ಮೃದುಮನಸು, ಅದಕ್ಕೆ ತಕ್ಕಂತೆ ಆಡುತ್ತಿದ್ದ ತೂಕವಾದ ಮಾತುಗಳನ್ನು ಕೇಳುತ್ತಲೇ ಎಷ್ಟೋ ಅಪ್ಪಂದಿರು ಬದಲಾಗಿದ್ದಾರೆ.

ವಯಸ್ಸಿಗೆ ಬಂದ ಹೆಣ್ಣುಮಕ್ಕಳ ಮದುವೆ ಮಾಡದೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ತಂದೆಯ ಪಾತ್ರವಾಗಿ ಮಿಥಿಲೆಯ ಸೀತೆಯರು ಚಿತ್ರದಲ್ಲಿ ಎಚ್. ಜಿ. ಸೋಮಶೇಖರ ರಾವ್ ಮನಮುಟ್ಟುತ್ತಾರೆ. ನಟ ಅನ್ನುವುದಕ್ಕಿಂತಲೂ ಹೆಚ್ಚಾಗಿ A great
performer ಎಂದೇ ಗುರುತಿಸಿಕೊಂಡಿರುವ ಕಮಲಹಾಸನ್‌ಗೆ ಸದಾ ಅಪ್ಪನಂತೆ ಸಲುಹಿದವರು ಅವರ ಹಿರಿಯಣ್ಣ ಚಾರು ಹಾಸನ್! ಅದನ್ನು ಸ್ವತಃ ಕಮಲ ಹಾಸನ್ ಅವರೇ ಹೇಳಿಕೊಂಡಿzರೆ. ಅರವತ್ತಕ್ಕೆ ಜೀವನವೇ ಮುಗಿದು ಹೋದಂತಾಡುವ ಜನರ ನಡುವೆ ತಮ್ಮ ಅರವತ್ತೊಂದನೇ ವಯಸ್ಸಿನಲ್ಲಿ ಮಗಳಿಗೆ ಅಪ್ಪನಾಗಿ, ಗುರುವಾಗಿ ಜತೆಗೆ ನಿಂತು ಹೊಸ ಇತಿಹಾಸವನ್ನು ಬರೆದ ವರು ಸಿತಾರ್ ಸಾಮ್ರಾಜ್ಯದ ಮೇರು ಪ್ರತಿಭೆ ಪಂಡಿತ್ ರವಿಶಂಕರ್!

ಸಾಕುಮಗನೆಂಬ ತೃಣಮಾತ್ರದ ಭಾವನೆಗೆ ಅವಕಾಶ ಕೊಡದಂತೆ ತಮ್ಮ ಸ್ವಂತ ಮಕ್ಕಳಿಗಿಂತ ಒಂದು ಬೊಗಸೆ ಹೆಚ್ಚೇ ಪ್ರೀತಿ ಯನ್ನು ತೋರುತ್ತ ಅದ್ಭುತವಾದ ತಂದೆತನಕ್ಕೆ ಉದಾಹರಣೆಯಂತಿರುವವರು ನಮ್ಮ ನಟ, ನಿರ್ದೇಶಕ ರಮೇಶ್ ಅರವಿಂದ್! ಎಲ್ಲ ಮಕ್ಕಳಂತೆ ಎದ್ದು ನಡೆದಾಡದ ಕಂದನೆಂಬ ತುಸುಮಾತ್ರದ ಬೇಸರ ತೋರದೇ, ಅಸಡ್ಡೆ ಮಾಡದೆ ತಮ್ಮೊಂದಿಗೆ ದೇಶ- ವಿದೇಶಗಳನ್ನು ಸುತ್ತಿಸುತ್ತ ಅಕ್ಕರೆಯಿಂದ ಸಲಹುತ್ತಿರುವವರು ನಟ ಅವಿನಾಶ್!

‘ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕತೆಯಾ ಹೇಳಿವೆ…’ ಎಂಬ ಹಾಡನ್ನು ಕೇಳಿದಾಗಲೆಲ್ಲ ತಂದೆಯ ಕೊರತೆಯನ್ನು ನೀಗಿಸಿದ ತನ್ನ ದೊಡ್ಡಪ್ಪನವರಾದ ಕೃಷ್ಣಶಾಸ್ತ್ರಿ (ಬೆಳಗೆರೆ ಜಾನಕಮ್ಮನವರ ಪತಿ)ಯವರನ್ನು ನೆನೆದು ಭಾವುಕರಾಗುತ್ತಿದ್ದರು ರವಿ. ಬರುವ ಎಲ್ಲ ಕಷ್ಟಗಳೂ ತಮಗೇ ಬಂದುಬಿಡಲಿ ತಮ್ಮ ಮಕ್ಕಳು ಸದಾ ಸಂತೃಪ್ತಿಯಿಂದ, ಸಂತೋಷದಿಂದ ಇರುವಂತಾ ಗಲಿ ಎನ್ನುವ ಹಂಬಲ ಎಲ್ಲ ಅಪ್ಪಂದಿರದ್ದು.

ಅದಕ್ಕಾಗಿ ಅದೇನೇನು ಪರಿಪಾಟಲು ಪಡುತ್ತಾರೆಂಬುದು ಅವರಿಗೆ ಮಾತ್ರ ಗೊತ್ತು. ಆದರೆ ಅದಕ್ಕೆ ವಿರುದ್ಧವಾಗಿ ಕೆಲವೊಮ್ಮೆ ಆಸರೆಯಾಗಬೇಕಿದ್ದ ಮಕ್ಕಳು ತಮ್ಮ ಕಣ್ಣೆದುರಿಗೇ ಬದುಕು ಮುಗಿಸಿಕೊಂಡು ಶಾಶ್ವತವಾಗಿ ತಮ್ಮನ್ನು ಒಂಟಿಯಾಗಿಸಿ ಹೊರಟು ಹೋಗುತ್ತಾರೆ. ಪುತ್ರಶೋಕಂ ನಿರಂತರಂ! ಎನ್ನುತ್ತ ಕಣ್ಣೀರಾಗುತ್ತಿದ್ದರು ಹಾಸ್ಯ ನಟ ಎಮ. ಎಸ್. ಉಮೇಶ್. ಹೇಳೀ ಕೇಳೀ ಪುರುಷ ಪ್ರಧಾನ ದೇಶವಾದಂಥ ನಮ್ಮ ನಾಡಿಗೆ father’s dayಯ ಅಗತ್ಯವಾದರೂ ಏನಿದೆ? ಎನ್ನುವ ಪ್ರಶ್ನೆ ಎದುರಾಗುವುದು ಸಹಜವೇ. ಏಕೆಂದರೆ ಅಪ್ಪ-ಅಮ್ಮನಿಂದ ದೂರವಿದ್ದೇ ಗೊತ್ತಿಲ್ಲ ನಮಗೆಲ್ಲ.

ಆದರೆ ವಿದ್ಯಾಭ್ಯಾಸ, ಉದ್ಯೋಗ, ವಿವಾಹದ ಕಾರಣಗಳಿಂದಾಗಿ ಅಪ್ಪ-ಅಮ್ಮಂದಿರಿಂದ ದೂರ ಉಳಿದು ಹೋದ ಜೀವಗಳಿಗೆ ಸಂಭ್ರಮಿಸಲು ಹೆತ್ತ ಮನಸುಗಳಿಗೆ ಖುಷಿ ಕೊಡಲು ಇದೊಂದು ಸದವಕಾಶ. ಒಳ್ಳೆಯ ವಿಷಯಗಳು, ಮನಸಿಗೆ ಖುಷಿ ಕೊಡು ವಂತಹ ಹಾಗೂ ನಮ್ಮ ಔನ್ನತ್ಯಕ್ಕೆ ಪೂರಕವಾಗಿರುವಂತಹ ಅಂಶಗಳನ್ನು ಅಳವಡಿಸಿಕೊಳ್ಳಲು ದೇಶ-ಕಾಲ-ಭಾಷೆಗಳ
ನಿರ್ಬಂಧದ ಅಗತ್ಯವಿಲ್ಲ. ಜೂನ್ ತಿಂಗಳ ಮೂರನೇ ರವಿವಾರದಂದು ಆಚರಿಸಲಾಗುವ father’s day ಗೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಾಂಕಗಳಿವೆ. ತನ್ನ ಕನಸುಗಳನ್ನು ಬದಿಗಿಟ್ಟು ನಮಗಾಗಿ ನಿರಂತರ ದುಡಿಯುವ ಅಪ್ಪನ ಮನಸ್ಸಿಗೆ ಖುಷಿ ಕೊಡಲು ದೊಡ್ಡ ದೊಡ್ಡ ಗಿಫ್ಟ್ ಗಳನ್ನು ಕೊಡುವ ಅಗತ್ಯವಿಲ್ಲ.

ಅವರ ಮೇಲಿನ ಎಲ್ಲ ಕಂಪ್ಲೇಂಟುಗಳನ್ನೂ ಮರೆತು ಅವರಿಗಿಷ್ಟವಾಗುವ ತಿಂಡಿಯನ್ನು ಮಾಡಿಕೊಡುವ ಮೂಲಕವೋ ಅವರಿಗಿಷ್ಟವಾಗುವ ವಸ್ತುವನ್ನು ಕೊಡಿಸುವ ಮೂಲಕವೋ omಜಿoಛಿ ಆಗಿ ಹೊಸ ಅಂಗಿಯೊಂದನ್ನು ಕೊಡುವ ಮೂಲಕವೋ
ಅವರೊಂದಿಗೆ ಸುಮ್ಮನೆ ಒಂದಷ್ಟು ದೂರ ಮಾತನಾಡುತ್ತ ನಡೆಯುತ್ತಲೋ ಅವರ ಬಾಲ್ಯದಲ್ಲಿ ಅವರು ಮಾಡುತ್ತಿದ್ದ ತುಂಟಾ ಟಗಳನ್ನು ಕೇಳಿ ನಲಿಯುತ್ತಲೋ ದೂರದಲ್ಲಿರುವ ಅಪ್ಪನಿಗೆ ಅಪ್ಪಾ ಹೇಗಿದ್ದೀಯ? ಎಂದು ವಿಚಾರಿಸುತ್ತಲೋ ನೀನಂದ್ರೆ ನನಗಿಷ್ಟ.

‘ಐ ಲವ್ ಯು ಪಾ…’ ಎಂದು ನಾಲ್ಕು ಸಾಲುಗಳನ್ನು ಬರೆದು ಅವರ ಅಂಗೈಲಿಟ್ಟು ನೋಡಿ, ಅವರು ಕಣ್ಣುಗಳು ಹೇಗೆ ಅರಳುತ್ತವೆ ಎಂದು. ಇದ್ದಾಗ ಅವರ ಬೆಲೆಯೇನೆಂದು ಅರಿಯದೆ ಕಳೆದುಕೊಂಡ ನಂತರ ಕಣ್ಣೀರು ಹಾಕಿ ಹಲುಬುವ ಬದಲು ಇದ್ದಾಗ ಹೆಚ್ಚು ನೋಯಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಮಕ್ಕಳಲ್ಲೂ ಮೂಡುವಂತಾಗಲಿ.