Thursday, 15th May 2025

ಜೂ.12ರಂದು ಲಾಸ್‌ ಏಂಜಲೀಸ್‌ ಯೋಗ ವಿವಿ ಮೊದಲ ಘಟಿಕೋತ್ಸವ

ವಾಷಿಂಗ್ಟನ್‌: ಲಾಸ್‌ ಏಂಜಲೀಸ್‌ನ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವು ಜೂ.12 ರಂದು ನಡೆಯಲಿದೆ. ಈ ಸಮಾರಂಭದಲ್ಲಿ 23 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ.

‘ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಅಮೆರಿಕದಲ್ಲಿ ಯೋಗ ವಿಶ್ವವಿದ್ಯಾ ಲಯ ಸ್ಥಾಪಿಸಿದ ಶ್ರೇಯಸ್ಸು ಡಾ.ಎಚ್‌.ಆರ್‌.ನಾಗೇಂದ್ರ ಅವರಿಗೆ ಸಲ್ಲಬೇಕು’ ಎಂದು ವಿ.ವಿ. ಸಂಸ್ಥಾಪಕ ನಿರ್ದೇಶಕ ಪ್ರೇಮ್ ಭಂಡಾರಿ ತಿಳಿಸಿದ್ದಾರೆ.

ಭಾರತದ ಯೋಗ ಗುರು ಡಾ.ಎಚ್‌.ಆರ್‌.ನಾಗೇಂದ್ರ ಅವರು ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ವಿಶ್ವಸ್ಥ ಮಂಡಳಿಯ ಚೇರಮನ್‌. ಬೆಂಗಳೂರಿನಲ್ಲಿರುವ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಎಸ್‌-ವಿವೈಎಎಸ್‌ಎ) ವಿವಿ ಕುಲಪತಿಯೂ ಆಗಿದ್ದಾರೆ.