Saturday, 10th May 2025

ವರ್ಗಾವಣೆಗೊಂಡ ತಾ.ಪಂ.ಇ.ಓ.ಗೆ ತಾಲೂಕು ಆಡಳಿತ ವತಿಯಿಂದ ಸನ್ಮಾನ

ಮಾನ್ವಿ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನಿಂದ ವರ್ಗಾವಣೆಗೊಂಡ ತಾ.ಪಂ.ಇ.ಓ.ಸ್ಟೇಲಾ ವರ್ಗೀಸ್ ಹಾಗೂ ರಾಯಚೂರಿಗೆ ವರ್ಗಾವಣೆ ಹೊಂದಿದ ಕಛೇರಿ ವ್ಯವಸ್ಥಪಕ ಮಹಾದೇವಯ್ಯ ಸ್ವಾಮಿ ಯವರನ್ನು ತಹಸೀಲ್ದಾರ್ ಚಂದ್ರಕಾ0ತ್ ಎಲ್.ಡಿ.ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ತಾ.ಪಂ.ನರೇಗಾ ಸಹಾಯಕ ನಿರ್ದೇಶಕರಾದ ಅಲಂಬಾಷ, ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸುರೇಶ, ಪಿ.ಡಿ.ಒ.ಮಹಾಂತೇಶ, ವಲಯ ಅರಣ್ಯಧಿಕಾರಿ ರಾಜೇಶ ನಾಯಕ, ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರಯ್ಯ ಸ್ವಾಮಿ, ಪಶು ಇಲಾಖೆಯ ಅಧಿಕಾರಿ ರಾಜು ಕಂಬಳೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಇನ್ನಿತರರು ಇದ್ದರು.