Tuesday, 13th May 2025

ಮಲಮಗಳಿಗೆ ಲೈಂಗಿಕ ಕಿರುಕುಳ: ತಂದೆಗೆ 107 ವರ್ಷ ಜೈಲು ಶಿಕ್ಷೆ

ಕಾಸರಗೋಡು: ತನ್ನ ಮಲಮಗಳಿಗೆ(16 ವರ್ಷ) ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕಾಗಿ ಆರೋಪಿ ತಂದೆಗೆ ಹೊಸದುರ್ಗ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 107 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಲ್ಲದೆ, 4.25 ಲಕ್ಷ ರೂ.ಗಳ ದಂಡ ವಿಧಿಸಿದೆ.

ಕುಲಿಕುನ್ನಿಲ್ ನಲ್ಲಿ ವಾಸಿಸುತ್ತಿರುವ ಇಡುಕ್ಕಿ ಮೂಲದ ವ್ಯಕ್ತಿಗೆ ಶಿಕ್ಷೆ ನೀಡಲಾಗಿದೆ. ಆರೋಪಿ ತಲಾ 20 ವರ್ಷ ಜೈಲು ಶಿಕ್ಷೆ ಮತ್ತು 75,000 ರೂ. ದಂಡ ಪಾವತಿಸಲು ವಿಫಲವಾದರೆ, ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

2012 ರಿಂದ 2018 ರವರೆಗೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೆಲ್ಪರಂಬಾ ಪೊಲೀಸರು ಪ್ರಕರಣ ದಾಖಲಿಸಿದ್ದರು.