Thursday, 15th May 2025

ಆರು ಮಕ್ಕಳನ್ನು ಬಾವಿಗೆ ತಳ್ಳಿ, ತಾಯಿಯೂ ಆತ್ಮಹತ್ಯೆ

ರಾಯಗಢ: ಮಹಾರಾಷ್ಟ್ರದಲ್ಲಿ ಆರು ಮಕ್ಕಳನ್ನು ಬಾವಿಗೆ ತಳ್ಳಿ, ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ವರದಿ ಯಾಗಿದೆ.

ದಲ್ಕತಿ ಗ್ರಾಮದಲ್ಲಿ ಘಟನೆ ನಡೆದಿದ್ದು 6 ಮಕ್ಕಳು ಮೃತಪಟ್ಟಿದ್ದಾಳೆ. ಮಹಿಳೆ ಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೃತಪಟ್ಟ 6 ಮಕ್ಕಳು 10 ವರ್ಷದ ಒಳಗಿನವರಾಗಿದ್ದಾರೆ. ಮೃತರಲ್ಲಿ ಒಂದು ಗಂಡು ಮಗು, ಐವರು ಹೆಣ್ಣು ಮಕ್ಕಳು ಸೇರಿದ್ದಾರೆ.

ಎಲ್ಲ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಹಿಳೆಯು, ಪತಿ ಜೊತೆ ಜಗಳ ಮಾಡಿಕೊಂಡು ಮಕ್ಕಳನ್ನು ಬಾವಿಗೆ ಎಸೆದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.