Monday, 12th May 2025

ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ನವದೆಹಲಿ : ನವದೆಹಲಿಯ ರಣಹುಲಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆ ಸ್ಥಳಕ್ಕೆ ಬರೋಬ್ಬರಿ 3 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಆಗಮಿಸಿದೆ.

ಶರ್ಮಾ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 450 ಚದರ ಯಾರ್ಡ್ ಫ್ಯಾಕ್ಟರಿಯಲ್ಲಿದ್ದ ಪೇಪರ್ ರೋಲ್ ಗಳು, ಕಾರ್ಟನ್ ಗಳು ಮತ್ತು ಯಂತ್ರಗಳು ನಾಶವಾಗಿವೆ. ಬೆಂಕಿಯ ನಿಖರ ಕಾರಣ ಕಂಡುಹಿಡಿಯಲಾಗಿಲ್ಲ’ ಎಂದು ಅಧಿಕಾರಿ ಹೇಳಿದರು.

ಬೆಂಕಿ ಹತೋಟಿಗೆ ತರಲು ಅಗ್ನಿಶಾಮಕ ಟೆಂಡರ್ ಗಳಿಗೆ ನಾಲ್ಕು ಗಂಟೆಬೇಕಾ ಯಿತು. ಬೆಳಿಗ್ಗೆ 6.20 ರ ಹೊತ್ತಿಗೆ ಬೆಂಕಿ ನಿಯಂತ್ರಣ ದಲ್ಲಿತ್ತು ಎಂದು ಅಗ್ನಿಶಾಮಕ ಅಧಿಕಾರಿ ಹೇಳಿದರು. ಘಟನೆಯಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.