Thursday, 15th May 2025

ಉಗ್ರರ ದಾಳಿ: ಸಿಬ್ಬಂದಿ ಸಾವು, ಆತನ ಪುತ್ರಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮಂಗಳವಾರ ಸಂಜೆ ಭಯೋತ್ಪಾದಕರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲಿ ಅವರ 7 ವರ್ಷದ ಮಗಳು ಗಾಯಗೊಂಡಿದ್ದಾಳೆ. ಶ್ರೀನಗರದ ಸೌರಾ ಪ್ರದೇಶದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.

ಮೃತ ಪೊಲೀಸ್ ನನ್ನು ಶ್ರೀನಗರದ ಸೌರಾ ಪ್ರದೇಶದ ಸೈಫುಲ್ಲಾ ಖಾದ್ರಿ ಎಂದು ಗುರುತಿಸಲಾಗಿದೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ನಂತರ ಪೋಲೀಸ್ ಸೈಫುಲ್ಲಾ ಖಾದ್ರಿ ಮತ್ತು ಅವರ ಮಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಸೈಫುಲ್ಲಾ ಮೃತಪಟ್ಟಿದ್ದಾರೆ.

ಭಯೋತ್ಪಾದಕರನ್ನು ಸೆರೆಹಿಡಿಯಲು ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ.