Monday, 19th May 2025

ಕ್ವಾಡ್ ನಾಯಕರ ಶೃಂಗಸಭೆ: ಜಪಾನ್‌ಗೆ ಮೋದಿ ಭೇಟಿ

ಟೋಕಿಯೊ: ಸದಸ್ಯ ರಾಷ್ಟ್ರಗಳ ನಡುವೆ ಸಹಕಾರವನ್ನು ಮತ್ತಷ್ಟು ಹೆಚ್ಚಿ ಸುವ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎರಡು ದಿನಗಳ ಭೇಟಿಗಾಗಿ ಜಪಾನ್‌ಗೆ ಆಗಮಿಸಿದ್ದಾರೆ.

ಟೋಕಿಯೋದಲ್ಲಿ ಬಂದಿಳಿದಿದ್ದೇನೆ. ಈ ಭೇಟಿಯ ಸಂದರ್ಭದಲ್ಲಿ ಕ್ವಾಡ್ ಶೃಂಗಸಭೆ, ಸಹವರ್ತಿ ಕ್ವಾಡ್ ನಾಯಕರನ್ನು ಭೇಟಿ ಮಾಡುವುದು, ಜಪಾನಿನ ಉದ್ಯಮಿಗಳು ಹಾಗೂ ಭಾರತೀಯ ಸಮುದಾಯದವರ ಜೊತೆ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ ಎಂದು ಪ್ರಧಾನಿ ಮೋದಿ ಜಪಾನೀಸ್ ಮತ್ತು ಇಂಗ್ಲಿಷ್ ಎರಡರಲ್ಲೂ ಟ್ವೀಟ್ ಮಾಡಿದ್ದಾರೆ.

ಮೋದಿ ಅವರು ಟೋಕಿಯೊದ ಹೋಟೆಲ್‌ನ ಹೊರಗೆ ಮಕ್ಕಳೊಂದಿಗೆ ಸಂವಾದ ನಡೆಸಿದರು. ಚಿಕ್ಕ ಹುಡುಗಿಯ ರೇಖಾಚಿತ್ರ ವನ್ನು ಕೂಡ ನೋಡಿದರು. ಮಕ್ಕಳೊಂದಿಗೆ ಸಂವಾದದ ಸಮಯದಲ್ಲಿ ಬಾಲಕಿಯ ಆಟೋಗ್ರಾಫ್ ಗೆ ಸಹಿ ಮಾಡಿದರು.

ತ್ರಿವರ್ಣ ಧ್ವಜದ ರೇಖಾಚಿತ್ರದೊಂದಿಗೆ ತನಗಾಗಿ ಕಾಯುತ್ತಿದ್ದ ಹುಡುಗನೊಂದಿಗೆ ಮಾತನಾಡಿದರು. ಹಿಂದಿಯನ್ನು ಎಲ್ಲಿಂದ ಕಲಿತೆ ಎಂದು ಬಾಲಕನನ್ನು ಪ್ರಧಾನಿ ಮೋದಿ ಕೇಳಿದರು.