Saturday, 10th May 2025

ವಾರ್ಷಿಕೋತ್ಸವದ ಅಂಗವಾಗಿ ಆಂಜನೇಯನಿಗೆ ವಿಶೇಷ ಪೂಜೆ

ಚಿಕ್ಕನಾಯಕನಹಳ್ಳಿ : ಪಟ್ಟಣದ ಮಹಾಲಕ್ಷಿö್ಮÃ ಬಡಾವಣೆಯಲ್ಲಿರುವ ಸುಪ್ರಸಿದ್ದ ಶ್ರೀ ಆಂಜನೇಯ ಸ್ವಾಮಿಗೆ ವಾರ್ಷಿಕೊತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದರ ಅಂಗವಾಗಿ ಸ್ವಾಮಿಗೆ ಪುಷ್ಪಾರ್ಚನೆ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯದ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಿ ಸ್ವಾಮಿಯವರ ಉತ್ಸವ ನೆರವೇರಿಸಲಾಯಿತು. ದಾಸಯ್ಯನವರಿಂದ ನೂರೊಂದು ಎಡೆ ಸೇವೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ಹಾಗು ಮಹಾಮಂಗಳಾರತಿ ನಂತರ ನೆರದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ಮಾಜಿ ಶಾಸಕ ಸುರೇಶ್‌ಬಾಬು, ಪುರಸಭಾ ಸದಸ್ಯ ಮಲ್ಲಿಕಾರ್ಜುನ್, ಮುಖಂಡರಾದ ಕೃಷ್ಣೇಗೌಡ, ಜಯರಾಮಯ್ಯ, ರಾಜಣ್ಣ, ಲ್ಯಾಬ್‌ರವಿ, ಸೇರಿದಂತೆ ನಗರದ ನೂರಾರು ಜನ ಭಕ್ತರು ವಾರ್ಷಿಕೊತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದರು.