Monday, 12th May 2025

ಉಕ್ಕು ಕಾರ್ಖಾನೆ ಮೇಲೆ ದಾಳಿ: 19 ಪೊಲೀಸರಿಗೆ ಗಾಯ, ವಾಹನಗಳಿಗೆ ಹಾನಿ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬೋಯಿಸರ್ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿನ ಉಕ್ಕು ಕಾರ್ಖಾನೆ ಮೇಲೆ 100ಕ್ಕೂ ಹೆಚ್ಚು ಕಾರ್ಮಿಕ ಸಂಘದ ಸದಸ್ಯರು ದಾಳಿ ನಡೆಸಿದ್ದು, 19 ಪೊಲೀಸರು ಗಾಯಗೊಂಡಿದ್ದು 12 ವಾಹನಗಳು ಹಾನಿ ಗೊಳಗಾಗಿವೆ.

ಕಾರ್ಖಾನೆಯ ಘಟನೆಯಲ್ಲಿ ಕೆಲ ಕಾರ್ಮಿಕರಿಗೂ ಗಾಯವಾಗಿದ್ದು , 27 ಜನರನ್ನು ಬಂಧಿಸಿದ್ದಾರೆ.

ಏಕಾಏಕಿ ಕೆಲವರು ಕಾರ್ಖಾನೆ ಆವರಣಕ್ಕೆ ನುಗ್ಗಿ ಕೆಲವು ನೌಕರರು ಮತ್ತು ಅಧಿಕಾರಿಗಳನ್ನು ಥಳಿಸಲು ಪ್ರಾರಂಭಿಸಿದರು. ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಿದರು ಎಂದು ತಿಳಿದುಬಂದಿದೆ.

ಪರಿಸ್ಥಿತಿ ನಿಭಾಯಿಸಲು ಪೊಲೀಸರು ಮುಂದಾದಾಗ ಹತ್ತೊಂಬತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು 12 ಪೊಲೀಸ್ ಜೀಪ್‍ ಕಿಟಕಿ ಗಾಜುಗಳನ್ನು ಗುಂಪು ಒಡೆದು ಹಾಕಿದೆ. ಘಟನೆಗೆ ಸಂಬಂಧ 27 ಜನರನ್ನು ಸದ್ಯ ಬಂಧಿಸಲಾಗಿದೆ ಹಲವರು ತಲೆಮರೆಸಿ ಕೊಂಡಿದ್ದಾರೆ ಅವರ ವಿರುದ್ಧ ಕೊಲೆ ಯತ್ನ, ಗಲಭೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ವಿವಿಧದ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.