Wednesday, 14th May 2025

ಅಮೆರಿಕಕ್ಕೆ ಅಕ್ರಮ ಪ್ರವೇಶ: ಆರು ಭಾರತೀಯ ಪ್ರಜೆಗಳ ಬಂಧನ

ನ್ಯೂಯಾರ್ಕ್: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಆರು ಭಾರತೀಯ ಪ್ರಜೆಗಳನ್ನು ಅಮೆರಿಕದ ಗಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮುಳುಗುತ್ತಿದ್ದ ದೋಣಿಯಿಂದ ರಕ್ಷಿಸಿದ ಅಧಿಕಾರಿಗಳು ಬಳಿಕ ವಶಕ್ಕೆ ಪಡೆದಿ ದ್ದಾರೆ.

ಅಕ್ವೆಸಾಸ್ನೆ ಮೊಹಾಕ್ ಪೊಲೀಸರು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ವರದಿ ಮಾಡಿದ್ದರು. ಬಳಿಕ, ಪೊಲೀಸರು ಕೆನಡಾದಿಂದ ಅಮೆರಿಕಾಗೆ ತೆರಳುತ್ತಿದ್ದ ಹಲವು ವ್ಯಕ್ತಿಗಳನ್ನು ಹೊಂದಿರುವ ದೋಣಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

ಮುಳುಗುತ್ತಿದ್ದ ದೋಣಿನ್ನು ಪತ್ತೆ ಹಚ್ಚಿದ ಪೊಲೀಸರು ಅವರನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬೋಟ್‌ಗಳಲ್ಲಿ ಲೈಫ್ ಜಾಕೆಟ್‌ನಂತಹ ಯಾವುದೇ ತುರ್ತು ಸೌಲಭ್ಯಗಳನ್ನು ಮಾಡಿಕೊಳ್ಳದೇ ಇರುವುದು ಕಂಡುಬಂದಿದೆ.

ಬಂಧಿತರ ಮೇಲೆ ಅಮೆರಿಕದ ಕಾನೂನನ್ನು ಉಲ್ಲಂಘಿಸಿ ಗಡಿ ಪ್ರವೇಶದ ಆರೋಪ ಹೊರಿಸಲಾಗಿದೆ. ಅಪರಾಧ ಸಾಬೀತಾದರೆ 10 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ.

ಈ ವರ್ಷದ ಜನವರಿಯಲ್ಲಿ ಭಾರತ ಮೂಲದ ಜಗದೀಶ್ ಬಲದೇವಭಾಯ್ ಪಟೇಲ್, ವೈಶಾಲಿಬೆನ್ ಪಟೇಲ್, ವಿಹಂಗಿ ಪಟೇಲ್ ಮತ್ತು ಧಾರ್ಮಿಕ್ ಪಟೇಲ್ ಅವರು ಎಮರ್ಸನ್ ಬಳಿ ಶವವಾಗಿ ಪತ್ತೆಯಾಗಿದ್ದರು. ಈ ಕುಟುಂಬವು ಕೆನಡಾದಿಂದ ಕಾಲ್ನಡಿಗೆಯಲ್ಲಿ ಅಮೆರಿಕಾಗೆ ತೆರಳಲು ಪ್ರಯತ್ನಿಸಿತ್ತು.