Tuesday, 13th May 2025

ಪಟಿಯಾಲ ಕಾನೂನು ವಿವಿ 71 ವಿದ್ಯಾರ್ಥಿಗಳಿಗೆ ಸೋಂಕು

ನವದೆಹಲಿ: ಪಂಜಾಬ್‌ನ ಪಟಿಯಾಲದಲ್ಲಿರುವ ರಾಜೀವ್‌ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 71 ವಿದ್ಯಾರ್ಥಿಗಳಿಗೆ ಕರೋನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೋವಿಡ್‌-19 ದೃಢಪಟ್ಟಿರುವ ವಿದ್ಯಾರ್ಥಿಗಳಲ್ಲಿ ಸೋಂಕಿನ ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಪ್ರತ್ಯೇಕ ಬ್ಲಾಕ್‌ ಗಳಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ವಿಶ್ವವಿದ್ಯಾಲಯದ ಒಟ್ಟು 86 ಜನರಲ್ಲಿ ಕೋವಿಡ್‌ ದೃಢಪಟ್ಟಿದ್ದು, ಪಂಜಾಬ್‌ ಆರೋಗ್ಯ ಇಲಾಖೆಯು ಆವರಣವನ್ನು ಕೋವಿಡ್‌ ಹಾಟ್‌ಸ್ಪಾಟ್‌ ಆಗಿ ಪರಿಗಣಿಸಿದೆ.

ದೇಶದಾದ್ಯಂತ ಗುರುವಾರ ಬೆಳಗ್ಗಿನವರೆಗೂ 24 ಗಂಟೆಗಳ ಅಂತರದಲ್ಲಿ ಕೋವಿಡ್‌ ದೃಢಪಟ್ಟ 3,275 ಹೊಸ ಪ್ರಕರಣಗಳು ದಾಖಲಾಗಿವೆ. ಸೋಂಕಿನ ಕಾರಣಗಳಿಂದ 55 ಮಂದಿ ಮೃತಪಟ್ಟಿದ್ದಾರೆ. ಬುಧವಾರ ದೇಶದಾದ್ಯಂತ 3,205 ಪ್ರಕರಣಗಳು ವರದಿಯಾಗಿದ್ದವು.

ಪಟಿಯಾಲದ ವಿವಿಯಲ್ಲಿ 550 ಮಾದರಿಗಳನ್ನು ಸಂಗ್ರಹಿಸಿ, ಕೋವಿಡ್‌ ಪರೀಕ್ಷೆಗೆ ಕಳುಹಿಸಲಾಗಿದೆ. ಮಾರ್ಚ್‌ನಲ್ಲಿ ಪಂಜಾಬ್‌ ಸರ್ಕಾರವು ಕೋವಿಡ್-19 ನಿರ್ಬಂಧಗಳನ್ನು ತೆಗೆದುಹಾಕಿತ್ತು.