Wednesday, 14th May 2025

ಪ್ರಧಾನಿ ಮೋದಿಗೆ ಬರ್ಲಿನ್‌ನಲ್ಲಿ ಅದ್ದೂರಿ ಸ್ವಾಗತ

ಬರ್ಲಿನ್ (ಜರ್ಮನಿ): ಮೂರು ದಿನಗಳ ಯುರೋಪ್ ಪ್ರವಾಸದ ಮೊದಲ ಹಂತದಲ್ಲಿ  ಜರ್ಮನಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಗೆ ಇಂದು ಬರ್ಲಿನ್‌ನಲ್ಲಿರುವ ಭಾರತೀಯ ವಲಸಿಗರಿಂದ ಅದ್ದೂರಿ ಸ್ವಾಗತ ದೊರೆತಿದೆ.

ಬರ್ಲಿನ್‌ನ ಹೊಟೇಲ್ ಅಡ್ಲಾನ್ ಕೆಂಪಿನ್ಸ್ಕಿಯಲ್ಲಿ ತಮ್ಮ ಆಗಮನಕ್ಕಾಗಿ ಕಾಯುತ್ತಿದ್ದ ಭಾರತೀಯ ಸಮುದಾಯದ ಸದಸ್ಯರು ಮೋದಿಯನ್ನು ಸ್ವಾಗತಿಸಿ ದರು. ಪ್ರಧಾನಿಯನ್ನು ನೋಡಿದ ಜನರು ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರು.

ಯುರೋಪಿಯನ್ ರಾಷ್ಟ್ರಗಳ ಭೇಟಿಯ ಮೊದಲ ಹಂತದಲ್ಲಿ ಜರ್ಮನಿಯ ಬರ್ಲಿನ್-ಬ್ರಾಂಡೆನ್ಬರ್ಗ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸಿದರು. ಆಗಮನದ ನಂತರ, ಈ ಭೇಟಿಯು ಭಾರತ ಮತ್ತು ಜರ್ಮನಿ ನಡುವಿನ ಸ್ನೇಹವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.