Wednesday, 14th May 2025

ಪೈಲ್ವಾನ್ ಧನ್ಯಕುಮಾರ್‌ನ ಚಾಕುವಿನಿಂದ ಚುಚ್ಚಿ ಕೊಲೆ

ಹರಪನಹಳ್ಳಿ: ಜಿಮ್ ಟ್ರೈನರ್ ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಹರಪನಹಳ್ಳಿ ತಾಲೂಕಿನ ಯು.ಬೇವಿನ ಹಳ್ಳಿ ದೊಡ್ಡ ತಾಂಡದ ಬಳಿ ನಡೆದಿದೆ.

ದಾವಣಗೆರೆ ನಗರದ ನಿಟುವಳ್ಳಿ ವಾಸಿ ಧನ್ಯಕುಮಾರ(೩೧) ಕೊಲೆಗೀಡಾದ ಜಿಮ್ ಟ್ರೈನರ್. ಬುಧವಾರ ಸ್ನೇಹಿತರೊಂದಿಗೆ ಉಚ್ಚಂಗಿದುರ್ಗದ ತೋಪಿಗೆ ಬಾಡೂಟಕ್ಕೆ ಬಂದಿದ್ದರು. ಮಾಹಿತಿ ಪಡೆದ ಮತ್ತೊಂದು ಗುಂಪು ಉಪಾಯದಿಂದ ಕರೆಸಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದೆ. ದೇಹದ ಸುಮಾರು ೩೦ ಕಡೆ ಚುಚ್ಚಲಾಗಿದೆ.

ದಾವಣಗೆರೆ ನಗರದ ಜಿಮ್ ಟ್ರೈನಿಂಗ್ ಸೆಂಟರನಲ್ಲಿ ತರಬೇತುದಾರರಾಗಿದ್ದರು, ಧನ್ಯ ಕುಮಾರ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಜಯನಗರ ಜಿಲ್ಲಾ ಎಸ್ಪಿ ಡಾ.ಅರುಣ ಅವರು ಸಾಕಷ್ಟು ಬಾರಿ ಚುಚ್ಚಿ ಕೊಲೆ ಮಾಡಿರುವುದು ನೋಡಿದರೆ ಇದು ಯಾವುದೊ ವಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ, ಸಮಗ್ರ ತನಿಖೆ ಮಾಡುತ್ತೇವೆ ಎಂದು ಹೇಳಿದರು.

ಅರಸಿಕೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಹಾಲಮೂರ್ತಿರಾವ್ , ಸಿಪಿಐ ನಾಗರಾಜ ಕಮ್ಮಾರ, ಪಿಎಸ್ ಐ ಪ್ರಶಾಂತ, ಹರಪನಹಳ್ಳಿ ಪಿ.ಎಸ್.ಐ.ಸಿ.ಪ್ರಕಾಶ್, ಮತ್ತು ಪೋಲಿಸ್ ಇಲಾಖೆಯ ಸಿಬ್ಬಂಧಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.