Tuesday, 13th May 2025

ಅಫ್ಘಾನಿಸ್ತಾನ: ಎರಡು ಸ್ಫೋಟ, ಒಂಬತ್ತು ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಎರಡು ಸ್ಫೋಟಗಳಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ.

ಬಾಲ್ಖ್ ಪ್ರಾಂತ್ಯದ ಮಜರ್-ಎ-ಷರೀಫ್ ಪ್ರದೇಶದಲ್ಲಿ ಸ್ಫೋಟಗಳು ವರದಿ ಯಾಗಿದ್ದರಿಂದ ಎರಡೂ ಸ್ಫೋಟಗಳು ಸಾರ್ವಜನಿಕ ಸಾರಿಗೆಯನ್ನು ಗುರಿ ಯಾಗಿಸಿಕೊಂಡಿವೆ.

ಸ್ಪೋಟದ ಪರಿಣಾಮ ಮೃತಪಟ್ಟ ಮೃತರ ದೇಹಗಳನ್ನು ಆಸ್ಪತ್ರೆಗೆ ಸಾಗಿಸ ಲಾಗಿದೆ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿವೆ ಎಂದು ಪ್ರಾಂತೀಯ ಆರೋಗ್ಯ ಅಧಿಕಾರಿಗಳು ತಿಳಿಸಿದರು.

ಕಳೆದ ವಾರ, ಮಜಾರ್-ಎ-ಷರೀಫ್‌ನ ಮಸೀದಿಯಲ್ಲಿ ನಡೆದ ಸ್ಫೋಟದಲ್ಲಿ ಹತ್ತಾರು ಆರಾಧಕರು ಮೃತಪಟ್ಟಿದ್ದರು. ಸಿ-ಡುಕಾನ್ ಮಸೀದಿಯಲ್ಲಿ ಸುಮಾರು 400 ಮಂದಿ ಪ್ರಾರ್ಥನೆಗೆ ಹಾಜರಾಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಏ.21 ರ ಸ್ಫೋಟದ ಹೊಣೆ ಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ.