Thursday, 15th May 2025

ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟ: ವೃದ್ದನ ಸಾವು

ಹೈದರಾಬಾದ್: ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಮನೆಯೊಂದರಲ್ಲಿ ಚಾರ್ಜ್‌ ಇರಿಸಲಾಗಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಡಿಟ್ಯಾಚೇಬಲ್ ಬ್ಯಾಟರಿ ಸ್ಫೋಟ ಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ 80 ವರ್ಷದ ವ್ಯಕ್ತಿ ಮೃತಪಟ್ಟು, ಇಬ್ಬರು ಗಾಯ ಗೊಂಡಿದ್ದಾರೆ.

80 ವರ್ಷದ ರಾಮಸ್ವಾಮಿ ಎಂಬ ವ್ಯಕ್ತಿ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ. ಅವರ ಪುತ್ರ ಪ್ರಕಾಶ್, ಪತ್ನಿ ಕಮಲಮ್ಮ ಮತ್ತು ಸೊಸೆ ಕೃಷ್ಣವೇಣಿ ಗಾಯಗೊಂಡಿದ್ದಾರೆ. ಪ್ರಕಾಶ್ ಕಳೆದೊಂದು ವರ್ಷಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಬಳಸುತ್ತಿದ್ದರು.

ವಾಹನವನ್ನು ಸೆಕೆಂಡ್ ಹ್ಯಾಂಡ್ ಮಾರಾಟದ ಮೂಲಕ ಖರೀದಿಸಲಾಗಿದೆಯೇ ಎಂದು ಪರಿಶೀಲಿಸುತ್ತಿದೆ ಎಂದು ವಾಹನ ತಯಾರಕ ಸಂಸ್ಥೆ ಹೇಳಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳು ಸ್ಫೋಟಗೊಳ್ಳುತ್ತಿರುವ ಘಟನೆಗಳನ್ನು ಕೇಂದ್ರ ಸರ್ಕಾರ ಗಂಭೀರ ವಾಗಿ ಪರಿಗಣಿಸಿದೆ.

ಜತೆಗೆ ಪರಿಹಾರ ಕ್ರಮಗಳನ್ನು ಸೂಚಿಸುವಂತೆಯೂ ಆದೇಶ ನೀಡಿದ್ದಾರೆ. ಇದರ ಜತೆಗೆ ವಾಹನ ಉತ್ಪಾದಕರಿಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ. ಉಲ್ಲಂಘಿಸುವ ಕಂಪನಿಗಳ ವಿರುದ್ಧ ದಂಡ ವಿಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.