Tuesday, 13th May 2025

ಪಾಲಕ್ಕಾಡ್‌: ಆರ್‌ಎಸ್‌ಎಸ್‌ ಕಾರ್ಯಕರ್ತನ ಹತ್ಯೆ

Murder

ಪಾಲಕ್ಕಾಡ್: ಆರ್‌ಎಸ್‌ಎಸ್‌ ಕಾರ್ಯಕರ್ತ ಶ್ರೀನಿವಾಸನ್ (45) ಎಂಬವರನ್ನು ಅನಾಮಧೇಯ ಗುಂಪೊಂದು ಶನಿವಾರ ಹತ್ಯೆ ಮಾಡಿದೆ.

ಪಿಎಫ್‌ಐ ನಾಯಕ ಸುಬೇರ್‌ (43) ಎಂಬವವರ ಹತ್ಯೆ ನಡೆದ 24 ಗಂಟೆಗಳ ಒಳಗಾಗಿ ಘಟನೆ ನಡೆದಿದೆ. ಪಾಲಕ್ಕಾಡ್‌ ಜಿಲ್ಲೆಯ ಎಲಪ್ಪಳ್ಳಿ ಗ್ರಾಮದಲ್ಲಿ ಶುಕ್ರವಾರ ಸುಬೇರ್‌ ಅವರ ಹತ್ಯೆಯಾಗಿತ್ತು. ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಅಂಗಡಿ ಹೊಂದಿರುವ ಶ್ರೀನಿವಾಸನ್ ಅವರ ಮೇಲೆ ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿದರು. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಿವಾಸನ್‌ ಕೊಲೆಯಲ್ಲಿ ಪಿಎಫ್‌ಐನ ರಾಜಕೀಯ ಅಂಗ ಎಸ್‌ಡಿಪಿಐ ಪಾತ್ರ ಇದೆ ಎಂದು ಬಿಜೆಪಿ ಆರೋಪಿಸಿದೆ.