Wednesday, 14th May 2025

ಅಸ್ಸಾಂನಲ್ಲಿ ಭಾರೀ ಮಳೆ: 7,400 ಮನೆಗಳಿಗೆ ಹಾನಿ

ಗುವಾಹಟಿ: ಅಸ್ಸಾಂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಗುರುವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಮೂವರು ಮಕ್ಕಳು ಸೇರಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ.

ಕಳೆದ 48 ಗಂಟೆಗಳಲ್ಲಿ 12 ಜಿಲ್ಲೆಗಳಲ್ಲಿ ಬಿರುಗಾಳಿ, ಮಳೆ ಮತ್ತು ಸಿಡಿಲು ಅಪ್ಪಳಿಸಿದೆ, 592 ಹಳ್ಳಿಗಳ ಸುಮಾರು 20,300 ಜನರು ಪರಿಣಾಮ ಬೀರಿದ್ದಾರೆ.

ಮೃತ ಎಂಟು ಜನರಲ್ಲಿ ನಾಲ್ವರು ದಿಬ್ರುಗಢ ಜಿಲ್ಲೆ, ಮೂವರು ಬಾರ್ಪೇಟಾದಲ್ಲಿ ಮತ್ತು ಒಬ್ಬರು ಗೋಲ್ಪಾರಾ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ.

ದಿಬ್ರುಗಢ್, ಬರ್ಪೇಟಾ, ಕಮ್ರೂಪ್ (ಮೆಟ್ರೋ), ಕಮ್ರೂಪ್ (ಗ್ರಾಮೀಣ), ನಲ್ಬರಿ, ಚಿರಾಂಗ್, ದರ್ರಾಂಗ್, ಕ್ಯಾಚಾರ್, ಗೋಲಾಘಾಟ್, ಕರ್ಬಿ ಆಂಗ್ಲಾಂಗ್, ಉದಲ್ಗುರಿ ಮತ್ತು ಗೋಲ್ಪಾರಾ ಜಿಲ್ಲೆಗಳಲ್ಲಿ 7,400 ಮನೆಗಳನ್ನು ಚಂಡಮಾರುತ ಸಂಪೂರ್ಣವಾಗಿ ಮತ್ತು ಭಾಗಶಃ ಹಾನಿಗೊಳಿಸಿದ್ದು, ಹಲವಾರು ಮರಗಳು, ಅನೇಕ ವಿದ್ಯುತ್ ಕಂಬಗಳು, ಧ್ವಂಸಗೊಂಡಿದೆ.