Monday, 12th May 2025

ಕರೌಲಿ ಗಲಭೆ: 46 ಮಂದಿ ಬಂಧನ

ಕರೌಲಿ: ಯುಗಾದಿ ಹಬ್ಬದ ದಿನ ರಾಜಸ್ಥಾನದ ಕರೌಲಿಯಲ್ಲಿ ಗಲಭೆ ನಡೆದು ಎರಡು ದಿನಗಳಾದರೂ ಅಲ್ಲಿನ ಜನರ ಆತಂಕ ಕಡಿಮೆ ಆಗಿಲ್ಲ. ಕೋಮುಘರ್ಷಣೆ ಹಿನ್ನೆಲೆಯಲ್ಲಿ ಪೊಲೀಸರು ಇದುವರೆಗೆ ೪೬ ಮಂದಿಯನ್ನು ಬಂಧಿಸಿದ್ದಾರೆ.

ಯಾರೋ ಕಿಡಿಗೇಡಿಗಳು ಮಾಡಿದ ಕೆಲಸಕ್ಕೆ ಎರಡು ಗುಂಪುಗಳು ಹೊಡೆದಾಡಿ ಕೊಂಡಿದ್ದು, ಹಲವಾರು ಅಂಗಡಿ, ವಾಹನಗಳು ಬೆಂಕಿಗೆ ಆಹುತಿ ಆಯಿತು. ಸುಮಾರು ೭ ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದರು.

ಯುಗಾದಿ ಹಬ್ಬದ ಪ್ರಯುಕ್ತ ಹಿಂದೂ ಸಂಘಟನೆಗಳು ಬೈಕ್‌ ರ್ಯಾಲಿ ಆಯೋ ಜಿಸಿದ್ದರು. ಕರೌಲಿ ಮಾರುಕಟ್ಟೆ ಬಳಿ ಬೈಕ್‌ ಗಳು ಬರುತ್ತಿದ್ದಂತೆ ಯಾರೊ ಕಿಡಿಗೇಡಿಗಳು ಕಲ್ಲು ಎಸೆದಿದ್ದರಿಂದ ಗಲಭೆ ಶುರುವಾಗಿದ್ದು, ಸ್ಥಳೀಯರು ಭೀತರನ್ನಾಗಿಸಿತು.

ಘಟನೆ ಹಿನ್ನೆಲೆಯಲ್ಲಿ ಪೊಲೀಸರು ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ.