Wednesday, 14th May 2025

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಲೀಟರ್‍ಗೆ 80 ಪೈಸೆ ಹೆಚ್ಚಳ

ನವದೆಹಲಿ: ಸತತ ತೈಲಬೆಲೆ ಏರಿಕೆ ಜನಸಾಮಾನ್ಯರನ್ನು ಕಂಗೆಡಿಸಿದೆ. ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‍ಗೆ ತಲಾ 80 ಪೈಸೆ ಹೆಚ್ಚಳವಾಗಿದೆ. ಒಟ್ಟಾರೆ ಮಾ.22 ರಿಂದ ಇಂದಿನವರೆಗೆ 6.40 ರೂ.ಗೆ ಏರಿಕೆಯಾದಂತಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 101.01 ರೂ.ಗೆ ಹೋಲಿಸಿದರೆ ಈಗ 101.81 ರೂ.ಗಳಾಗಿದೆ. ಡೀಸೆಲ್ ರೂ.92.27 ರಿಂದ ರೂ.93.07 ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ವಿವಿಧ ಸಂಘಟನೆಗಳು ಕಾಂಗ್ರೇಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದೆ.

ತೈಲ ದರ ಏರಿಕೆ ನಿಲಿಸಿ ಕಡಿಮೆ ಮಾಡಬೇಕೆಂದು ಸಾಮಾಜಿಕ ಜಾಲತಾಣಲ್ಲಿ ಜನರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ 106.46 ರೂ ಇದ್ದು ಔರಂಗಾಬಾದ್‍ನಲ್ಲಿ ಅತಿ ಹೆಚ್ಚು 117.50 ರೂ ಇದೆ.