Wednesday, 14th May 2025

ತೈಲ ಬೆಲೆ ಏರಿಕೆ: ಲೀಟರ್’ಗೆ ತಲಾ 80 ಪೈಸೆ ಹೆಚ್ಚಳ

ನವದೆಹಲಿ: ತೈಲ ಬೆಲೆ ಏರಿಕೆ ಸರಣಿ ಮುಂದುವರೆದಿದ್ದು ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್ ತಲಾ 80 ಪೈಸೆಗಳಷ್ಟು ಹೆಚ್ಚಳವಾಗಿದೆ.

ಸತತ ಒಂಬತ್ತು ದಿನಗಳಲ್ಲಿ ಒಟ್ಟು 5.60 ರೂ. ಹೆಚ್ಚಳವಾದಂತಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರವು ಈಗ 101.01 ರೂ.ಗೆ, ಡೀಸೆಲ್ ದರಗಳು 92.27 ರೂ.ಮುಟ್ಟಿದೆ.

ಮಾ.22 ರಂದು ದರ ಪರಿಷ್ಕರಣೆ ಒಂದೇ ಒಂದು ದಿನ ಬಿಡುವು ನೀಡಿ ಉಳಿದಂತೆ ಇಂದು ಕೂಡ ತೈಲ ಬೆಲೆ ಹಚ್ಚಾಗಿದೆ. ದಿನನಿತ್ಯದ ಬೆಲೆ ಪರಿಷ್ಕರಣೆಯನ್ನು ಕಳೆದ ಜೂನ್ 2017 ರಲ್ಲಿ ಪರಿಚಯಿಸಲಾಯಿತು.

ಪ್ರಸ್ತುತ ದೇಶದ ವಿವಿಧ ರಾಜ್ಯಗಳಲ್ಲಿ ಪಟ್ಟಿ ನೋಡಿದರೆ ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಲೀ 115.88.ಕೊಲ್ಕತ್ತಾ – 110.52 ಮಧ್ಯಪ್ರದೇಶ -113.34. ರಾಜಸ್ತಾನ 117 .ಬೆಂಗಳೂರು 106.46 ದರವಿದೆ.