Monday, 12th May 2025

40 ಕೋಟಿ ರೂ.ಮೌಲ್ಯದ 10 ಕೆಜಿ ಹೆರಾಯಿನ್ ವಶ

ನವದೆಹಲಿ: ದೆಹಲಿ ಪೋಲೀಸ್ ವಿಶೇಷ ತಂಡವು ಅಂತರರಾಷ್ಟ್ರೀಯ ಮಾದಕವಸ್ತುಗಳ ಜಾಲವನ್ನು ಭೇದಿಸಿದ್ದು, ರೂ 40 ಕೋಟಿ ಮೌಲ್ಯದ 10 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.

ಜಾಲದ ಪ್ರಮುಖ ಸದಸ್ಯರನ್ನು ಬಂಧಿಸಲಾಗಿದ್ದು, ಹೆರಾಯಿನ್ ಅನ್ನು ಮ್ಯಾನ್ಮಾರ್‌ನಿಂದ ಮಣಿಪುರದ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾ ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನಜೀರ್ ಮತ್ತು ದಿನೇಶ್ ಸಿಂಗ್ ಎಂದು ಗುರುತಿಸ ಲಾಗಿದ್ದು. ಎನ್‌ಡಿಪಿಎಸ್ ಕಾಯ್ದೆಯ ಸೂಕ್ತ ಸೆಕ್ಷನ್‌ ಗಳ ಅಡಿಯಲ್ಲಿ ಪ್ರಕರಣವನ್ನು ಪಿಎಸ್ ವಿಶೇಷ ಸೆಲ್‌ನಲ್ಲಿ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ಸೆಲ್ ನ ಡಿಸಿಪಿ ಜಸ್ಮೀತ್ ಸಿಂಗ್ ತಿಳಿಸಿದ್ದಾರೆ.

ಮಾದಕವಸ್ತುಗಳನ್ನು ಮರೆ ಮಾಡಲು ಮತ್ತು ಸಾಗಿಸಲು ರಹಸ್ಯ ಕುಳಿಯನ್ನು ಹೊಂದಿರುವ ಕಾರನ್ನು ವಶಪಡಿಸಿಕೊಳ್ಳಲಾಗಿದೆ.