Sunday, 11th May 2025

ವಿಶ್ವವಾಣಿ ಕ್ಲಬ್‌ ಹೌಸ್‌ 250ರ ಸಂಭ್ರಮ

ಕ್ಲಬ್‌ಹೌಸ್ ಸಂವಾದ ೨೫೦

ಕರೋನಾ ಅವಧಿಯಲ್ಲಿ ಮಾತಿನ ಮೂಲಕ ಎಲ್ಲರನ್ನೂ ಒಂದುಗೂಡಿಸಿದ ಕ್ಲಬ್‌ಹೌಸ್

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ಕ್ಲಬ್‌ಹೌಸ್‌ನ ಮಹತ್ವ ಸಾರಿದ ಮೊದಲ ಮಾಧ್ಯಮ ಸಂಸ್ಥೆ ನಿಮ್ಮ ಪ್ರೀತಿಯ ವಿಶ್ವವಾಣಿ ಪತ್ರಿಕೆ. ಹೀಗೆ ಆರಂಭಗೊಂಡ ವಿಶ್ವವಾಣಿ ಕ್ಲಬ್‌ಹೌಸ್‌ಗೆ 250 ಕಾರ್ಯಕ್ರಮಗಳನ್ನು ಪೂರೈಸಿದ ಸಂಭ್ರಮ.

ಈ ಸುಧೀರ್ಘ ಪಯಣಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣಕರ್ತರಾದ ಶ್ರೋತೃಗಳಿಗೆ ಸೋಮವಾರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆ ನಿರ್ಮಿಸಿಕೊಡ ಲಾಗಿತ್ತು. ತಂತ್ರಜ್ಞಾನ ಹೊಸ ಸಾಧ್ಯತೆಗಳನ್ನು ತೆರೆಯುತ್ತಾ ಬಂದಿದೆ. ಅದರ ಇನ್ನೊಂದು ಮುಖವೇ ಕ್ಲಬ್‌ಹೌಸ್. ಕರೋನಾ ಅವಧಿಯಲ್ಲಿ ಮಾತಿನ ಮೂಲಕ ಎಲ್ಲರನ್ನೂ ಒಂದು ಮಾಡುವಲ್ಲಿ ಯಶಸ್ವಿ ಯಾದ ಕ್ಲಬ್ ಹೌಸ್ ಹಲವು ದಾಖಲೆಗಳನ್ನು ಮಾಡಿದೆ. ಅದರಲ್ಲೂ ವಿಶ್ವವಾಣಿ ಕ್ಲಬ್‌ಹೌಸ್ ಸಾಕಷ್ಟು ದಾಖಲೆಗಳ ಜತೆ, ಜನಪರ, ಜನಪ್ರಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ವಿಶ್ವವಾಣಿ ಕ್ಲಬ್‌ಹೌಸ್‌ನ ಶ್ರೋತೃಗಳಿಗೆ ತಮ್ಮ ಅಭಿಪ್ರಾಯ ಗಳನ್ನು ಹಂಚಿಕೊಳ್ಳಲು ವೇದಿಕೆ ರೂಪಿಸ ಲಾಯಿತು. ನೂರಾರು ತಮ್ಮ ಅನುಭವ, ಕ್ಲಬ್‌ಹೌಸ್‌ನ ಅನುಕೂಲ, ವಿಶ್ವವಾಣಿ ಕ್ಲಬ್‌ಹೌನ್ ಜನಪ್ರಿಯತೆ ಬಗ್ಗೆ ಮಾತನಾಡಿದರು.

? ಕ್ಲಬ್ ಹೌಸ್‌ನಿಂದ ಹೊಸ ಪ್ರಯೋಗ ಮತ್ತು ಆವಿಷ್ಕಾರ ಮಾಡಲು ಸಾಧ್ಯವಿದೆ.

? ಮುಂದಿನ ೬ ತಿಂಗಳಲ್ಲಿ ಕ್ಲಬ್‌ಹೌಸ್ ಮತ್ತಷ್ಟು ಜನಪ್ರಿಯವಾಗುತ್ತದೆ.

? ಮುಂದಿನ ದಿನಗಳಲ್ಲಿ ವಿಶ್ವವಾಣಿ ಕ್ಲಬ್‌ಹೌಸ್, ಇನ್ನಷ್ಟು ವೈವಿದ್ಯಮಯವಾಗುತ್ತದೆ. ಹೊರಳು ಮಾರ್ಗವನ್ನೂ ಪಡೆದು ಕೊಳ್ಳುತ್ತದೆ.

***

ಕರೋನಾ ಎರಡನೇ ಅಲೆಯ ಮಧ್ಯಂತರದಲ್ಲಿ ಕ್ಲಬ್‌ಹೌಸ್ ಆರಂಭವಾಗಿತ್ತು. ಕೆಲವು ಕಾರ್ಯಕ್ರಮ ಕೇಳಿದ್ದೆ. 2021ರ
ಜೂ.18 ಮೊದಲ ಸಂಚಿಕೆ ಪ್ರಾರಂಭ ಮಾಡಿದಾಗ ಯಾವುದೇ ಒಂದು ಸಿದ್ಧಮಾದರಿ ಇರಲಿಲ್ಲ. ಕಾರ್ಯಕ್ರಮದ ಮೊದಲಿಗೆ ಮೋಹನ್ ಮತ್ತು ನಾನು ಇಬ್ಬರೇ ಇದ್ದೆವು. ಕೆಲವು ಕಾರ್ಯಕ್ರಮ ನಂತರ ರೂಪಾ ನಮ್ಮನ್ನು ಸೇರಿಕೊಂಡರು. ಕ್ಲಬ್‌ಹೌಸ್ ಒಂದು ಅದ್ಭುತ ವೇದಿಕೆ. ಇದನ್ನು ಹೆಚ್ಚು ಜನರಿಗೆ ತಲುಪಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳೊಂದಿಗೆ ಜವಾಬ್ದಾರಿಯಿಂದ ನಡೆದುಕೊಳ್ಬೇಕು. ಶ್ರೋತೃಗಳ ಸಮಯ ತುಂಬಾ ಮುಖ್ಯವಾಗುತ್ತದೆ. ಅವರು ಇಲ್ಲಿ ಭಾಗವಹಿಸಿದ್ದಕ್ಕೆ, ಹೊಸ
ವಿಚಾರ ತಿಳಿದುಕೊಂಡೆ ಎಂಬ ಭಾವ ಬರಬೇಕು. ಹಾಗಾಗಿ ಮಹನೀಯರು ಬೆಳೆದು ಬಂದ ಹಾದಿಯನ್ನು ಅವರ ಮೂಲಕವೇ ತಿಳಿಯಲು ಪ್ರಾರಂಭ ಮಾಡಲಾಯಿತು. ನಂತರದ ದಿನಗಳಲ್ಲಿ ಅರಿವಿನ ಉಪನ್ಯಾಸ ಎಂಬ ಶೀರ್ಷಿಕೆಯಡಿ ದಿನವೂ ವಿವಿಧ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಯಿತು. ಶ್ರೋತೃಗಳ ಸಲಹೆ ಕೇಳುತ್ತಾ ಇದೀಗ ಯಶಸ್ವಿ ಯಾಗಿ 250 ಕಾರ್ಯಕ್ರಮ ಮುಟ್ಟಿದ್ದೇವೆ. ಈಗಲೂ ಪ್ರತಿಯೊಂದು ಕಾರ್ಯಕ್ರಮದ ಟಿಪ್ಪಣಿ ಮಾಡಿಕೊಳ್ಳುತ್ತೇನೆ.

-ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ ಪತ್ರಿಕೆ

***

ವಿಶ್ವೇಶ್ವರ ಭಟ್ಟರು ಏನಾದರೂ ಕೆಲಸ ಮಾಡುತ್ತಲೇ ಇರುತ್ತಾರೆ. ಸುಮ್ಮನೆ ಕೂತವರೇ ಅಲ್ಲ. ಭಟ್ಟರು ಹೇಳಿದ್ದಕ್ಕೆ ಕ್ಲಬ್‌ಹೌಸ್‌ಗೆ ಬಂದು ಕೆಲವು ಕಾರ್ಯಕ್ರಮಗಳನ್ನು ಕೇಳಿದೆ. ವಿಶ್ವವಾಣಿ ಕ್ಲಬ್‌ಹೌಸ್‌ಅನ್ನು ಪ್ರಾರಂಭದಲ್ಲಿ ಅಷ್ಟು ಮುಖ್ಯವಾಗಿ ಪರಿಗಣಿಸಿ ರಲಿಲ್ಲ. ಹೀಗಾಗಿ ಆರಾಮವಾಗಿದ್ದ ನನಗೆ ಇದಕ್ಕೆ ಸಿಲುಕಿಕೊಂಡೆ ಅನ್ನಿಸಿದ್ದು ಉಂಟು. ಏಕೆಂದರೆ ಕಾರ್ಯಕ್ರಮ ಇಷ್ಟು
ಪರಿಣಾಮ ಬೀರುತ್ತದೆ ಎಂದುಕೊಂಡಿರಲಿಲ್ಲ. ಆದರೂ ವಿಶ್ವೇಶ್ವರ ಭಟ್ ಒಳ್ಳೆಯ ಯಶಸ್ಸಿನ ಕುದುರೆ ಎಂಬುದು ನನಗೆ ತಿಳಿದಿತ್ತು. ಹೀಗಾಗಿ ನನಗೆ ನಂಬಿಕೆಯಿತ್ತು. ಮೊದಲಿನಿಂದಲೂ ಮಾತಿನ ಚಪಲ ಹೊಂದಿದ್ದ ನಾನು, ಕೇವಲ ಸ್ನೇಹಿತರ ಜತೆ ಮಾತ ನಾಡುತ್ತಿದ್ದೆ. ಜನ ಸಮೂಹದಲ್ಲಿ ಮಾತನಾಡುವ ಹಾಗೆ ಕ್ಲಬ್‌ಹೌಸ್ ಮೂಲಕ ಭಟ್ಟರು ಮಾಡಿದರು. ಈ ವೇದಿಕೆಯು ಸಂಬಂಧವೇ ಇಲ್ಲದ್ದನ್ನು ತಿಳಿದುಕೊಳ್ಳುವ ಹಾಗೆ ಮಾಡುತ್ತದೆ. ಪ್ರತಿನಿತ್ಯ ಉಲ್ಲಾಸ, ಉತ್ಸಾಹ ನೀಡುತ್ತದೆ. ಚಟುವಟಿಕೆ ಇದೆ. ಆಲಸ್ಯ ದೂರವಾಗಿದೆ.

– ನಂಜನಗೂಡು ಮೋಹನ್ ಸಂಪಾದಕೀಯ ಸಲಹೆಗಾರ, ವಿಶ್ವವಾಣಿ ಪತ್ರಿಕೆ

***

250 ಪುಸ್ತಕ ಓದಿದರೆ ಎಷ್ಟು ಅರಿವು ಮೂಡಿಸುತ್ತದೆಯೋ ಅಷ್ಟು ಮಾಹಿತಿಯನ್ನು ಈ 250 ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮದ ಮೂಲಕ ತಿಳಿದಿದ್ದೇನೆ. ವೇದಿಕೆಯಲ್ಲಿ ಮಾತನಾಡುವ ಶೈಲಿಯ ಬಗ್ಗೆ ಇನ್ನಷ್ಟು ಕಲಿಯಲು ಸಹಾಯವಾಗಿದೆ. ಎಲ್ಲಕ್ಕೂ ಮುಖ್ಯವಾಗಿ ತಾಳ್ಮೆ ಕಲಿತಿದ್ದೇನೆ. ಕಾರ್ಯಕ್ರಮದಲ್ಲಿ ಎನೇ ಹೆಚ್ಚುಕಮ್ಮಿಯಾದರೂ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದವರ ಮೇಲೆ ಬರುತ್ತದೆ. ಭಟ್ ಸರ್, ಮೋಹನ್ ಸರ್ ಜತೆ ಕೆಲಸ ಮಾಡುವಾಗ ತುಂಬಾ ಅಲರ್ಟ್ ಆಗಿರಬೇಕು. ಇವರಿಬ್ಬರಿಂದ ನಿರಂತರ ಕಲಿಯುವಂತಾಗಿದೆ. ಪ್ರತಿನಿತ್ಯ ಭಾಷಣಕಾರರನ್ನು ಹುಡುಕುವುದು ಕೆಲವೊಮ್ಮೆ ಪ್ರೆಶರ್ ಕುಕ್ಕರ್ ರೀತಿ ಆಗುತ್ತದೆ. ಆದರೆ, ಅದನ್ನು ನಿಭಾಯಿಸುವ ನಿಟ್ಟಿನಲ್ಲಿ ದಿನನಿತ್ಯ ನನ್ನನ್ನು ನಾನು ಸಜ್ಜುಗೊಳಿಸುತ್ತಿದ್ದೇನೆ.
-ರೂಪಾ ಗುರುರಾಜ್ ಅಂಕಣಕಾರರು

***

ಇಷ್ಟೊಂದು ಯಶಸ್ವಿ ಕಾರ್ಯಕ್ರಮ ನೀಡಿರುವ ಕ್ಲಬ್‌ಹೌಸ್ ಕನ್ನಡದಲ್ಲಿ ಬೇರೆ ಇಲ್ಲ. ತುಂಬಾ ಯಶಸ್ವಿಯಾಗಿ ಮೂಡಿ ಬರುತ್ತಿದೆ. ಇನ್ನಷ್ಟು ಒಳ್ಳೆ ಕಾರ್ಯಕ್ರಮಗಳನ್ನು ನೀಡಲಿ.
-ಎಸ್.ಷಡಕ್ಷರಿ ಉದ್ಯಮಿ, ಅಂಕಣಕಾರ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಭಾಗವಹಿಸುವ ಸ್ಪೀಕರ್‌ಗಳು ಆವರ ಕ್ಷೇತ್ರದಲ್ಲಿ ತಜ್ಞರಾಗಿರುತ್ತಾರೆ. ತಮ್ಮ ವಿಚಾರವನ್ನು ಸಮಾನ್ಯ ಜನರಿಗೆ ತಿಳಿಯುವ ಹಾಗೆ ಹೇಳುವುದು ಅವರ ವಿಶೇಷ ಪ್ರತಿಭೆ. ಈ ಮೂರು ಮಂದಿಯ ಜತೆ ಕಾರ್ಯಕ್ರಮದಲ್ಲಿ ಅಥಿತಿಯಾಗಿ ಆಗಮಿಸಿ ಮಾತನಾಡುವವರು ಈ ಯಶಸ್ಸಿಗೆ ಕಾರಣಾಗುತ್ತಾರೆ.
-ಡಾ. ಶ್ವೇತಾ ಬಿ.ಸಿ ವೈದ್ಯೆ

ನಮ್ಮ ಮನೆಯ ಸಂಭ್ರಮ ಇದು. ವಿಶ್ವವಾಣಿ ಕ್ಲಬ್ ಹೌಸ್ ಅಂದರೆ ಮಾದರಿ ಕ್ಲಬ್. ಅನೇಕರು ಇದನ್ನು ಅನುಸರಿಸುತ್ತಾರೆ.
ಕಾರ್ಯಕ್ರಮದ ನಿರ್ವಹಣೆಯ ಜವಬ್ಧಾರಿ ಹೊತ್ತಿರುವ ಮೂವರು ಸೃಷ್ಠಿ-ಸ್ಥಿತಿ- ಲಯ ಕಾಪಾಡಿಕೊಂಡು ಹೋಗುತ್ತಿದ್ದಾರೆ.
-ಕಿರಣ್ ಉಪಾಧ್ಯಾಯ ಅಂಕಣಕಾರ

ಕೇಳಗರ ಮಾನದ ಮಾತು ಕಾರ್ಯಕ್ರಮದ ನಿರಂತರತೆ ಬಹಳ ಖುಷಿ ತರುತ್ತದೆ . ಬರಹಗಾರ್ತಿಯಾಗಿ ನನ್ನ ಬರವಣಿಗೆಗೆ ಸಹಾಯವಾಗುವ ವಿಚಾರಗಳನ್ನು ಈ ಮೂಲಕ ಕಲಿಯುತ್ತಿದ್ದೇನೆ.

– ಪ್ರೇಮ ಮಲ್ಕಿ

೨೫೦ ರಸದೌತಣ ಕೂಟ ನೀಡಿದ್ದೀರಿ. ನಾನು ಕಾರ್ಯಕ್ರಮದ ಆಯೋಜನೆಯ ಕೆಲಸ ಮಾಡಿರುವುದರಿಂದ, ವಿಶ್ವವಾಣಿ ಕ್ಲಬ್
ಕಾರ್ಯಕ್ರಮ ರೂಪಿಸುವ ಹಿಂದಿರುವ ಕಷ್ಟ ತಿಳಿಯು ತ್ತದೆ. ಸದಭಿರುಚಿಯ ಕಾರ್ಯಕ್ರಮ ನಡೆದುಕೊಂಡು ಬಂದಿದೆ.
– ವಿಜಯಲಕ್ಷ್ಮಿ ಪುಟ್ಟಿ

ಸಣ್ಣ ವಯಸ್ಸಿನಿಂದ ರೇಡಿಯೋ ಕೇಳುವ ಅಭ್ಯಾಸ. ರೇಡಿಯೋ ಒನ್ ವೇ ಆದರೆ ಕ್ಲಬ್‌ಹೌಸ್ ಟು ವೇ. ನನ್ನ ವಿಚಾರವನ್ನು
ಯಾರಿಗೆ ಸೂಕ್ತವೋ ಅವರಿಗೆ ಕೇಳಿಸುತ್ತೇನೆ. ರೇಡಿಯೋ ಮಿಸ್ ಮಾಡಿಕೊಳ್ಳುತ್ತಿದ್ದೆ. ಆದರೆ ಅದನ್ನು ವಿಶ್ವವಾಣಿ ಕ್ಲಬ್‌ಹೌಸ್ ಮತ್ತೆ ನೀಡಿದೆ.
-ಶೈಲಜ

ವೈವಿಧ್ಯ ವಿಚಾರಗಳ ಬಗ್ಗೆ ಕೇಳುತ್ತಿದ್ದೇವೆ. ಈ ಕಲಿಕೆ ಶಾಲೆಗೆ ನಾನು ಶೇ. ೮೫ರಷ್ಟು ಅಟೆಂಡೆನ್ಸ್ ಗಳಿಸಿದ ವಿದ್ಯಾರ್ಥಿ. ವಿಶ್ವೇಶ್ವರ ಭಟ್ ಅವರ ಪ್ರವಾಸ ಮತ್ತು ಸಮಯ ಪ್ರಜ್ಞೆ ಬಗ್ಗೆ ಕಾರ್ಯಕ್ರಮ ಮೂಡಿಬರಲಿ.
– ಪಂಡುರಂಗಿ ಕಿನಿ

ಕರೋನಾದಿಂದಾಗಿ ನಮ್ಮಲ್ಲಿ ಭಯದ ವಾತಾವರಣವಿತ್ತು. ಆ ಸಂದರ್ಭದಲ್ಲಿ ಬೇಸರಗೊಂಡ ಮನಗಳಿಗೆ ಸದಭಿರುಚಿ ನೀಡಿದ್ದು ಕ್ಲಬ್‌ಹೌಸ್.
-ವೀಣಾ ನಾಗರಾಜ್

ವಿದೇಶಗಳಲ್ಲಿ ವಾಸವಾಗಿರುವ ಕನ್ನಡದ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮ ವಿಶ್ವವಾಣಿ ಕ್ಲಬ್‌ಹೌಸ್. ಇನ್ನಷ್ಟು ಸಾಧಕರನ್ನು ಕರೆಸಿ ಕಾರ್ಯಕ್ರಮ ನೀಡಿ.
ಬಸಣ್ಣ, ಅಮೆರಿಕ ನಿವಾಸಿ